Trending

ಭದ್ರಾವತಿ : ಬೊಮ್ಮನಕಟ್ಟೆ ಗ್ರಾಮದಲ್ಲಿ ₹4 ಲಕ್ಷ ಮೌಲ್ಯದ ಗಾಂಜಾ ವಶ : ಒಬ್ಬ ಆರೋಪಿ ಬಂಧನ

Spread the love

ಭದ್ರಾವತಿ : ತಾಲೂಕಿನ ಬೊಮ್ಮನಕಟ್ಟೆ ಗ್ರಾಮದಲ್ಲಿ ಗಾಂಜಾ ಅಕ್ರಮ ಸಂಗ್ರಹ ನಡೆಯುತ್ತಿದೆ ಎಂಬ ಖಚಿತ ಸುಳಿವಿನ ಮೇರೆಗೆ, ಪೇಪರ್ ಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ನೇತೃತ್ವದ ತಂಡವು 28-01-2026ರಂದು ದಿಢೀರ್ ದಾಳಿ ನಡೆಸಿದೆ.

ಪೊಲೀಸ್ ದಾಳಿಯಲ್ಲಿ, ಗ್ರಾಮದಲ್ಲಿ ಇರುವ ಹುಲ್ಲಿನ ಬಣವೆಯೊಳಗೆ ಚತುರವಾಗಿ ಅಡಗಿಸಿಟ್ಟಿದ್ದ 8 ಕೆಜಿ 60 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಇದರ ಮಾರುಕಟ್ಟೆ ಮೌಲ್ಯ ಸುಮಾರು ₹4.03 ಲಕ್ಷ ಎಂದು ಅಂದಾಜಿಸಲಾಗಿದೆ.

ಈ ಪ್ರಕರಣದಲ್ಲಿ ಅಬ್ದುಲ್ ಖದ್ದೂಸ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಅಕ್ರಮ ಮಾದಕ ವಸ್ತುವನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಈ ಕುರಿತು ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 0016/2026 ಅಡಿಯಲ್ಲಿ NDPS ಕಾಯ್ದೆ ಕಲಂ 8(c), 20(b)(ii)(B) ಪ್ರಕಾರ ಪ್ರಕರಣ ದಾಖಲಿಸಿಕೊಂಡು, ಆರೋಪಿಯ ಜಾಲ ಹಾಗೂ ಮೂಲಗಳ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ.

[pj-news-ticker]