Trending

‘ನೈತಿಕ ಪೊಲೀಸ್‌ಗಿರಿ’ಯ ಭಯ: Hindu ಕಾರ್ಯಕರ್ತರಿಗೆ ಹೆದರಿ Pizza ಔಟ್ಲೆಟ್ 2ನೇ ಮಹಡಿಯಿಂದ ಜಿಗಿದ ಜೋಡಿ, ಕಾಲು ಮುರಿತ

Spread the love

ಶಹಜಹಾನ್‌ಪುರ: ಕಾಂಟ್‌ನ ಅಕರ್ರಾ ರಸೂಲ್‌ಪುರ ಗ್ರಾಮದ ಬಳಿಯ ಕೆಫೆಗೆ ಜೋಡಿಗಳು ಬರುತ್ತಿದ್ದಾರೆ ಎಂಬ ಮಾಹಿತಿ ಪಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ಆಗಮಿಸಿದರು. ಆ ಪ್ರವೇಶದಲ್ಲಿ ಪ್ರತಿಭಟನೆ ನಡೆಸಿ ಚಿತ್ರೀಕರಣ ಮಾಡಲು ಪ್ರಾರಂಭಿಸಿದರು. ಇದರಿಂದ ಆತಂಕಗೊಂಡ ಯುವಕ-ಯುವತಿಯ ಜೋಡಿಯೊಂದು ಎರಡನೇ ಮಹಡಿಯಲ್ಲಿರುವ ಕೋಣೆಯ ಕಿಟಕಿಯಿಂದ ಹಾರಿದ್ದು ಇಬ್ಬರೂ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬರೇಲಿ ತಿರುವಿನ ಬಳಿಯ ಪಿಜ್ಜಾ ಅಂಗಡಿಯಲ್ಲಿ ಜೋಡಿ ಕುಳಿತಿದ್ದಾಗ, ಹಿಂದುತ್ವ ಸಂಘಟನೆಗೆ ಸೇರಿದ ಏಳರಿಂದ ಎಂಟು ಪುರುಷರು ಒಳಕ್ಕೆ ನುಗ್ಗಿ ತಮ್ಮ ಗುರುತಿನ ಚೀಟಿಗಳನ್ನು ಕೇಳಲು ಪ್ರಾರಂಭಿಸಿದರು. ಈ ವೇಳೆ ಗಾಬರಿಗೊಂಡ ಪುವಾಯನ್ ನಿವಾಸಿ ವಿಶಾಲ್ ಕಟ್ಟಡದಿಂದ ಜಿಗಿದಿದ್ದಾಗಿ ಹೇಳಿದ್ದಾರೆ. ಆ ಗುಂಪು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದು ಅಲ್ಲದೆ ವೀಡಿಯೊ ಮಾಡಲು ಪ್ರಾರಂಭಿಸಿತ್ತು ಎಂದು ವಿಶಾಲ್ ಆರೋಪಿಸಿದ್ದಾರೆ ಎಂದು ಎಸ್‌ಪಿ ರಾಜೇಶ್ ದ್ವಿವೇದಿ ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಮೂವರು ವ್ಯಕ್ತಿಗಳು ಮತ್ತು ಐವರು ಅಪರಿಚಿತ ವ್ಯಕ್ತಿಗಳು ಸೇರಿದಂತೆ ಎಂಟು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕಾರ್ಯಕರ್ತರು ಸೇರುತ್ತಿದ್ದಂತೆ ಗಾಬರಿಗೊಂಡ ಮಾಲೀಕ ಮತ್ತು ನೌಕರರು ಕೆಫೆಗೆ ಬೀಗ ಹಾಕಿ ಪರಾರಿಯಾಗಿದ್ದರು. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದಾಗ ಅಲ್ಲಿ ಶೂಗಳು ಮತ್ತು ಚಪ್ಪಲಿಗಳು ಬಿದ್ದಿರುವುದು ಕಂಡುಬಂದಿದೆ.

[pj-news-ticker]