Trending

ಚೋರ್ಲಾ ಘಾಟ್ ₹400 ಕೋಟಿ ರಾಬರಿ ಕೇಸ್ : ಎಸ್ಪಿ ಹೇಳಿದ್ದೇನು?

Spread the love

ಬೆಳಗಾವಿ: ಕರ್ನಾಟಕ-ಗೋವಾ ಗಡಿಯಲ್ಲಿ 400 ಕೋಟಿ ರೂಪಾಯಿ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದಾರೆ.

ಜ.6ರಂದು ನಾಸಿಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಂದ ನಮಗೆ ಪತ್ರ ಬರುತ್ತದೆ. ಚೋರ್ಲಾ ಘಾಟ್​​ನಲ್ಲಿ ರಾಬರಿಯಾಗಿದೆ, ಹಳೆಯ ನೋಟಿನ 400 ಕೋಟಿ ಆಗಿರಬಹುದು ಅಂತಾ ಪತ್ರದಲ್ಲಿ ಇತ್ತು. ಅಕ್ಟೋಬರ್ 22ರಂದು ಸಂದೀಪ್ ಪಾಟೀಲ್ ಎಂಬಾತನನ್ನು ವಿಶಾಲ್ ನಾಯ್ಡು ಎಂಬಾತ ನಾಸಿಕ್​​ನಲ್ಲಿ ಕಿಡ್ನಾಪ್ ಮಾಡಿರುತ್ತಾರೆ. ಅಕ್ಟೋಬರ್ 16ರಂದು 400 ಕೋಟಿ ಅಪಹರಣ ಆಗಿದೆ. ಆ ಹಣ ಎಲ್ಲಿಗೆ ಹೋಗಿದೆ ಅಂತಾ ಪ್ರಶ್ನೆ ಮಾಡುತ್ತಾರೆ. ಈ ರಾಬರಿಯಾಗಿದ್ದು ಚೋರ್ಲಾ ಘಾಟ್​​ನಲ್ಲಿ ಅಂತಾ ಪತ್ರದಲ್ಲಿದೆ ಎಂದರು.

ಈ ಕಾರಣಕ್ಕೆ ನಮ್ಮ ಖಾನಾಪುರದ ಸಬ್​​ ಇನ್ಸ್​​ಪೆಕ್ಟರ್​​ ಸೇರಿ ಒಂದು ತಂಡವನ್ನು ಕಳುಹಿಸಿದ್ದೇವೆ. ಎಸ್ಐಟಿ ರಚನೆ ಆಗಿದೆ. ಸಂದೀಪ್ ಪಾಟೀಲ್ ಬಳಿ ನಮ್ಮವರು ಮಾತಾಡಿದ್ದಾರೆ. ಕಿಡ್ನಾಪ್ ಮಾಡಿದವರು ನನಗೆ ಹಣ ದರೋಡೆ ಬಗ್ಗೆ ಹೇಳಿದ್ದಾಗಿ ಸಂದೀಪ್ ನಮ್ಮ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಕೆ.ರಾಮರಾಜನ್ ತಿಳಿಸಿದರು.

ಇಲ್ಲಿ ಘಟನೆ ಆಗಿರುವ ಕಾರಣ ಯಾರು ಬಂದು ದೂರು ಕೊಟ್ಟರೂ ನಾವು ತೆಗೆದುಕೊಳ್ಳುತ್ತೇವೆ. ನೋಡಿದವರು, ಸಂತ್ರಸ್ತರು ಬಂದು ದೂರು ಕೊಟ್ಟರೆ ತೆಗೆದುಕೊಳ್ಳುತ್ತೇವೆ. ಮಹಾರಾಷ್ಟ್ರ ಪೊಲೀಸರು ತನಿಖೆ ಮಾಡುತ್ತಿದ್ದಾರೆ, ನಾವು ಸಹಕಾರ ಕೊಡುತ್ತೇವೆ. ಚೋರ್ಲಾ ಘಾಟ್ ಮೂರು ರಾಜ್ಯಗಳ ವ್ಯಾಪ್ತಿಗೆ ಬರುತ್ತದೆ. ಯಾವ ನೋಟು ಅಂತಾ ಅಧಿಕೃತವಾಗಿ ಗೊತ್ತಾಗಿಲ್ಲ. ಚೋರ್ಲಾ ಘಾಟ್​​ನಲ್ಲಿ ಹೊಸದಾಗಿ ಸಿಸಿಟಿವಿ ಅಳವಡಿಸುತ್ತೇವೆ ಎಂದು ಹೇಳಿದರು.

[pj-news-ticker]