Trending

ಬರೋಬ್ಬರಿ 700 ಕೆಜಿ ಕಲಬೆರಕೆ ಪನೀರ್ ವಶ!

Spread the love

ಜೈಪುರ: ಆಹಾರ ಕಲಬೆರಕೆ ವಿರುದ್ಧ ವಿಶೇಷ ಅಭಿಯಾನದ ಸಂದರ್ಭದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಶನಿವಾರ ರಾಜಸ್ಥಾನದ ಜೈಪುರದಲ್ಲಿ ಬರೋಬ್ಬರಿ 700 ಕೆಜಿ ಕಲಬೆರಕೆ ಪನೀರ್ ಅನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಶುದ್ಧ ಆಹಾರ, ಮಿಲಾವತ್ ಪರ್ ವಾರ್” ಅಭಿಯಾನದ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಸುರಕ್ಷತಾ ಆಯುಕ್ತ ಟಿ ಶುಭಮಂಗಳ ತಿಳಿಸಿದ್ದಾರೆ.

ಆಹಾರ ಸುರಕ್ಷತಾ ಅಧಿಕಾರಿಗಳ ತಂಡವು ಶಾಸ್ತ್ರಿ ನಗರದ ಭಟ್ಟ ಬಸ್ತಿ ಪ್ರದೇಶದಲ್ಲಿರುವ ‘ಬರ್ಸಾನಾ ಪನೀರ್ ಭಂಡಾರ್’ ಗೋದಾಮನ್ನು ಪರಿಶೀಲಿಸಿದ್ದು, ಅಲ್ಲಿ ಕಲಬೆರಕೆ ಪನೀರ್ ಪತ್ತೆಯಾಗಿದೆ. ಸಂಪೂರ್ಣ ದಾಸ್ತಾನು ಸ್ಥಳದಲ್ಲೇ ನಾಶಪಡಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

[pj-news-ticker]