Trending

ಶಿವಮೊಗ್ಗದ ಕುಂಚೇನಹಳ್ಳಿ ಬಳಿ ಸಂಸದ ಬಿ.ವೈ. ರಾಘವೇಂದ್ರ ಕಾರಿಗೆ ಬುಲೇರೋ ಡಿಕ್ಕಿ

Spread the love

ಶಿವಮೊಗ್ಗ: ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದ ಸಂಸದ ಬಿ.ವೈ. ರಾಘವೇಂದ್ರ ಅವರ ಕಾರಿಗೆ ಮಾರ್ಗ ಮಧ್ಯೆ ಹಿಂಬದಿಯಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಕುಂಚೇನಹಳ್ಳಿ ಸಮೀಪ ಸಂಸದರ ಕಾರು ಸಾಗುತ್ತಿದ್ದ ವೇಳೆ ಹಿಂದಿನಿಂದ ಬಂದ ಬುಲೇರೋ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಸಂಸದರ ಕಾರಿನ ಹಿಂಬದಿಯ ಭಾಗಕ್ಕೆ ಹಾನಿಯಾಗಿದ್ದು, ಅದೃಷ್ಟವಶಾತ್ ಸಂಸದ ಬಿ.ವೈ. ರಾಘವೇಂದ್ರ ಅವರು ಯಾವುದೇ ಅಪಾಯಕ್ಕೆ ಒಳಗಾಗದೇ ಪಾರಾಗಿದ್ದಾರೆ.

ಈ ಸಂಬಂಧ ಸ್ಥಳೀಯ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

[pj-news-ticker]