Trending

ಶಿವಮೊಗ್ಗ: ರಾಜಕೀಯದಲ್ಲೂ ಒಳ್ಳೆ ಬ್ಯಾಟಿಂಗ್ ಮಾಡಬೇಕು : ಗೂಗ್ಲಿ, ಸ್ವಿಂಗ್ ಹಾಕದೇ ಸಕ್ಸಸ್​ ಇಲ್ಲ: ಸತೀಶ್ ಜಾರಕಿಹೊಳಿ

Spread the love

ಶಿವಮೊಗ್ಗ: “ನಾನೂ ಕ್ರಿಕೆಟ್​ ಪ್ಲೇಯರ್​. ರಾಜಕೀಯದಲ್ಲಿಯೂ ಒಳ್ಳೆಯ ಬ್ಯಾಟಿಂಗ್​ ಮಾಡಬೇಕು. ಗೂಗ್ಲಿ ಹಾಕದೇ ಸಕ್ಸಸ್​ ಇಲ್ಲ” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಶಿವಮೊಗ್ಗದಲ್ಲಿಂದು ಮಾತನಾಡಿದ ಜಾರಕಿಹೊಳಿ, “ಕ್ರಿಕೆಟ್​​ ಪಂದ್ಯಾವಳಿಗಾಗಿ ಶಿವಮೊಗ್ಗಕ್ಕೆ ಬಂದಿದ್ದೇನೆ. ಇದು ಖಾಸಗಿ ಕಾರ್ಯಕ್ರಮ” ಎಂದರು. ಮುಂದುವರೆದು ಮಾತನಾಡಿ, “ರಾಜಕೀಯದಲ್ಲಿಯೂ ಒಳ್ಳೆಯ ಬ್ಯಾಟಿಂಗ್​​​ ಮಾಡಬೇಕು. ಸ್ವಿಂಗ್​, ಗೂಗ್ಲಿ ಹಾಕಬೇಕು. ಒಳ್ಳೆಯ ಬ್ಯಾಂಟಿಂಗ್ ಮಾಡದೆ ಹೋದರೆ ಉಳಿಗಾಲವಿಲ್ಲ” ಎಂದರು.

ಇದೇ ವೇಳೆ, “ಈಗ ನಾನು ರಾಜಕೀಯದಲ್ಲಿ ಆಟ ಆಡುವವರಿಗೆ ಸಪೋರ್ಟ್​​ ಮಾಡ್ತಾ ಇದ್ದೇನೆ” ಎಂದು ಹೇಳಿದರು.

ನಿಮ್ಮ ಗುರಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೋ ಅಥವಾ ಸಿಎಂ ಸ್ಥಾನಕ್ಕೋ ಎಂಬ ಪ್ರಶ್ನೆಗೆ, “ರಾಜಕೀಯದ ದೊಡ್ಡ ಆಟ ಮುಂದಿದೆ” ಎಂದರು.

ಸತೀಶ್​ ಜಾರಕಿಹೊಳಿ ಮುಂದಿನ ಸಿಎಂ ಎಂದು ಘೋಷಣೆ ಕೂಗುತ್ತಿದ್ದಂತೆಯೇ ಕಾರ್ಯಕರ್ತರಿಗೆ ಸಚಿವರು, “ನೀವು ಈ ರೀತಿ ಕೂಗಿದರೆ ಯಾವುದೇ ಪ್ರಯೋಜನವಿಲ್ಲ. ಹೀಗೆ ಕೂಗುವುದನ್ನು ಬಿಟ್ಟರೆ ನೀವೂ ಲೀಡರ್ ಆಗುತ್ತೀರಿ” ಎಂದು ಕಿವಿಮಾತು ಹೇಳಿದರು.

ಬಜೆಟ್ ನಂತರ ಸಿಎಂ ಬದಲಾಗುತ್ತಾರೆಯೇ ಎಂಬ ಪ್ರಶ್ನೆಗೆ, “ಅದೆಲ್ಲಾ ದೆಹಲಿ ಹಾಗೂ ಬೆಂಗಳೂರಿನಲ್ಲಿ ಕೇಳಬೇಕು” ಎಂದು ತಿಳಿಸಿದರು.‌

[pj-news-ticker]