Trending

ಮೆಸ್ಸಿಗೆ ದುಬಾರಿ ವಾಚ್ ಗಿಫ್ಟ್ ನೀಡಿದ ಅನಂತ್ ಅಂಬಾನಿ… ಬೆಲೆ ಕೇಳಿದ್ರೆ ದಂಗಾಗ್ತೀರಾ

Spread the love

ಜಾಮ್‌ನಗರ: ಅರ್ಜೆಂಟೀನಾದ ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರ ಭಾರತ ಪ್ರವಾಸದ ವೇಳೆ ರಿಲಯನ್ಸ್ ಇಂಡಸ್ಟ್ರೀಸ್‌ನ ಅನಂತ್ ಅಂಬಾನಿ ಅವರು ಅತ್ಯಂತ ದುಬಾರಿ ಮತ್ತು ಅಪರೂಪದ ಉಡುಗೊರೆಯನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಲಿಯೋನೆಲ್ ಮೆಸ್ಸಿ ಜಾಮ್‌ನಗರದ ‘ವಂತಾರಾ’ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅನಂತ್ ಅಂಬಾನಿ ದಂಪತಿ ಈ ವಿಶೇಷ ಗೌರವ ನೀಡಿದ್ದಾರೆ.

ಉಡುಗೊರೆಯಾಗಿ ನೀಡಿದ ದುಬಾರಿ ವಾಚ್:

ಮೆಸ್ಸಿಗೆ ಅನಂತ್ ಅಂಬಾನಿ ‘ರಿಚರ್ಡ್ ಮಿಲೆ’ (Richard Mille RM 003-V2 GMT Tourbillon ‘Asia Edition’) ಎಂಬ ಹೆಸರಿನ ಅತ್ಯಂತ ಐಷಾರಾಮಿ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಅಂದಾಜು ಬೆಲೆ ಸುಮಾರು 10.9 ಕೋಟಿ (1.2 ಮಿಲಿಯನ್ ಡಾಲರ್) ಎಂದು ಹೇಳಲಾಗಿದೆ.

ಈ ಮಾದರಿಯ ವಾಚ್‌ಗಳು ಜಗತ್ತಿನಲ್ಲಿ ಕೇವಲ 12 ಜನರಲ್ಲಿ ಮಾತ್ರ ಇರುವಂತದ್ದು. ಇದು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಶಿಷ್ಟ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ.

[pj-news-ticker]