Trending

ತೀರ್ಥಹಳ್ಳಿ: ಬಸ್ ಚಾಲಕನ ಬೇಜವಾಬ್ದಾರಿಯಿಂದ ಅಪಘಾತ – ಬೈಕ್ ಸವಾರನ ಸ್ಥಿತಿ ಗಂಭೀರ

Spread the love

ತೀರ್ಥಹಳ್ಳಿ:  ಖಾಸಗಿ ಶಾಲಾ ವಾಹನ ಹಾಗೂ ಬೈಕ್ ನಡುವೆ ಕುಶಾವತಿ ಸಮೀಪ ಅಪಘಾತ ಸಂಭವಿಸಿದ್ದು, ಬೈಕ್ ಸವಾರನಿಗೆ ಗಂಭೀರ ಗಾಯಗಳಾದ ಘಟನೆ ಶನಿವಾರ ನಡೆದಿದೆ.

ಗಾಯಳು ಬೈಕ್ ಸವಾರನನ್ನು ತೀರ್ಥಹಳ್ಳಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಕುಶಾವತಿ ರಸ್ತೆ ತಿರುವಿನಲ್ಲಿ ಶಿವಮೊಗ್ಗದಿಂದ ದಾವಣಗೆರೆಯ ಹೊನ್ನಾಳಿಯ ಶಾಲಾ ಪ್ರವಾಸದ ವಿದ್ಯಾರ್ಥಿಗಳು ಪಯಣಿಸುತ್ತಿದ್ದ ಬಸ್ ಚಾಲಕ ಅತೀ ವೇಗದಿಂದ ಅಪಾಯಕಾರಿ ತಿರುವಿನಲ್ಲಿ ನಿಯಂತ್ರಕ್ಕೆ ಬಾರದೇ  ಬೈಕ್ ಸವಾರನ ಮೇಲೆ ಬಂದಿದೆ. ಕನಿಷ್ಠ 10 ಮೀ. ತನಕ ಬಸ್ಸಿನ ಅಡಿಯಲ್ಲೇ ಬೈಕ್ ರಸ್ತೆ ಉಜ್ಜಿದ್ದು, ಬೈಕ್ ಸವಾರ ಗಂಭೀರ ಸ್ಥಿತಿಯಲ್ಲಿದ್ದು, ತಕ್ಷಣವೇ ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದಾರೆ.

ಬಸ್ ಚಾಲಕನ ಅತಿ ವೇಗದ ಚಾಲನೆಯೇ ಒಂದು ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶಾಲಾ ಮಕ್ಕಳು ಇರುವ ಸಂದರ್ಭ ಇಂತಹ ವೇಗದ ಅವಶ್ಯಕತೆ ಇತ್ತಾ ಎಂಬ ಪ್ರಶ್ನೆಯೂ ಸ್ಥಳೀಯರಲ್ಲಿ ಮೂಡಿದೆ. ಇದು ಖಾಸಗಿ ಬಸ್ ಆಗಿದ್ದು ತೀರ್ಥಹಳ್ಳಿಯಲ್ಲೂ ಸಹ ಖಾಸಗಿ ಶಾಲೆಯ ಬಸ್ ಗಳನ್ನು ಕೂಡಾ ಚಾಲಕರು ಅತಿ ವೇಗದಿಂದ ಚಲಾಯಿಸುತ್ತಿದ್ದಾರೆ.

ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಹಾಗೂ ತೀರ್ಥಹಳ್ಳಿ ಪೊಲೀಸರು ಎಚ್ಚರಿಕೆ ವಹಿಸಬೇಕಿದೆ.

[pj-news-ticker]