Trending

ಬಹುಭಾಷಾ ನಟ ಮೋಹನ್‌ಲಾಲ್‌ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಘೋಷಣೆ

Spread the love

ತಿರುವನಂತಪುರಂ: ಬಹುಭಾಷಾ ನಟ, ಮಲಯಾಳಂ ಸೂಪರ್‌ ಸ್ಟಾರ್‌ ಮೋಹನ್‌ಲಾಲ್‌ ಅವರಿಗೆ 2023ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ.

ಭಾರತೀಯ ಚಲನಚಿತ್ರೋದ್ಯಮಕ್ಕೆ ನೀಡಿದ ಅನನ್ಯ ಸೇವೆಗಾಗಿ ಮೋಹನ್‌ಲಾಲ್‌ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಸೆಪ್ಟೆಂಬರ್‌ 23ರಂದು ನಡೆಯುವ 71ನೇ ರಾಷ್ಟ್ರ ಚಲಚನಚಿತ್ರ ಪ್ರಸಸ್ತಿ ಪ್ರದಾನ ಸಭಾರಂಭದಲ್ಲಿ ಮೋಹಲ್‌ಲಾಲ್‌ ಅವರಿಗೆ ಈ ಅವಾರ್ಡ್‌ ಪ್ರದಾನ ಮಾಡಲಾಗುತ್ತದೆ. ಈಗಾಗಲೇ 5 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿರುವ ಅವರ ಮಲಯಾಳಂ ಜತೆಗೆ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

[pj-news-ticker]