Trending

ಪಬ್ಲಿಕ್‌ ಶಾಲೆಗಳ ಸಂಖ್ಯೆ 500 ರಿಂದ 800ಕ್ಕೆ ಹೆಚ್ಚಳ : ಸಚಿವ ಮಧು ಬಂಗಾರಪ್ಪ

Spread the love

ಶಿವಮೊಗ್ಗ: ರಾಜ್ಯದಲ್ಲಿ ನೂತನವಾಗಿ ಆರಂಭಿಸಲು ಉದ್ದೇಶಿಸಲಾಗಿದ್ದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗ‌ಳ ಸಂಖ್ಯೆಯನ್ನು 500ರಿಂದ 800ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಹೆಚ್ಚಿನ ಸಂಖ್ಯೆಯ ಶಾಲೆಗಳನ್ನು ತೆರೆಯುವ ಉದ್ದೇಶವಿದೆ. ಅದಕ್ಕಾಗಿ ಸರ್ಕಾರ 3 ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ. ಅಲ್ಲದೆ ಅಂತಹ ಆಯ್ದ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಸರ್ಕಾರೇತರ ಸಂಸ್ಥೆಗಳಿಂದ ಆರ್ಥಿಕ ನೆರವು ಪಡೆದುಕೊಳ್ಳಲಾಗುವುದು. ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ 13000 ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಶೀಘ್ರವೇ ಇನ್ನೂ 18500 ಶಿಕ್ಷಕರ ನೇಮಕ ಮಾಡಲಾಗುವುದು.

ಜಾತಿಗಣತಿ ಅಕ್ಟೋಬರ್‌ ಮಾಸಾಂತ್ಯಕ್ಕೆ ಪೂರ್ಣಗೊಳಿಸಲಾಗುವುದು. ಶಿಕ್ಷಕರು ರಜೆ ದಿನದಲ್ಲಿ ಜನಗಣತಿಯ ಸರ್ವೇಗೆ ಹೋಗುತ್ತಾರೆ. ತರಗತಿ ನಡೆಯುವಾಗ ಅವರು ಸರ್ವೇಗೆ ಹೋಗಲ್ಲ. ಮಕ್ಕಳ ಕಲಿಕೆಗೆ ಅಡಚಣೆಯಾಗದಂತೆ ಶಿಕ್ಷಕರ ಸೇವೆ ಬಳಸಿಕೊಳ್ಳಲಾಗುವುದು. ಕೇಂದ್ರದ ಪಠ್ಯಕ್ರಮದಲ್ಲಿ ಆಪರೇಷನ್‌ ಸಿಂಧೂರ್‌ ಬಗ್ಗೆ ಪಾಠ ಇಟ್ಟಿದ್ದಾರೆ. ಅದನ್ನು ಬಿಟ್ಟು ಸಿಂಧೂರ್‌ ಘಟನೆ ಯಾಕೆ ನಡೆಯಿತು ಎಂದು ತಿಳಿಸಬೇಕಿದೆ ಎಂದರು.

[pj-news-ticker]