ಶಿವಮೊಗ್ಗ: ಅಂಗವೈಕಲ್ಯ ಸರ್ಟಿಫಿಕೇಟ್ ಮಾಡಿಕೊಡಲು 1,500 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮೆಗ್ಗಾನ್ ಬೋಧನಾ ಆಸ್ಪತ್ರೆ ಕ್ಲರ್ಕ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಕ್ಲರ್ಕ್ ನೀಲಕಂಠೇಗೌಡ ಬಲೆಗೆ ಬಿದ್ದವ. ಸಾಗರ ತಾಲ್ಲೂಕಿನ ಅಂದಾಸುರ ಗ್ರಾಮದ ನಾಗರಾಜ ಕೆ. ಎಂಬುವವರು ತಮ್ಮ 8 ವರ್ಷದ ಅಂಗವಿಕಲ ಮಗಳ ಪ್ರಮಾಣಪತ್ರ ಮಾಡಿಸಲು ಮುಂದಾಗಿದ್ದರು. ಓದಲು ಹಾಗೂ ಸರ್ಕಾರಿ ಸೌಲಭ್ಯಕ್ಕಾಗಿ ಪ್ರಮಾಣಪತ್ರ ಅಗತ್ಯವಾಗಿತ್ತು. ಆದರೆ, ಕ್ಲರ್ಕ್ ನೀಲಕಂಠೇಗೌಡ ಅವರು ದುಡ್ಡು ಕೊಡದೆ ಪ್ರಮಾಣ ಪತ್ರ ನೀಡಲು ಒಪ್ಪಿರಲಿಲ್ಲ.
ಈ ನಡುವೆ ಕ್ಲರ್ಕ್ ದುಡ್ಡು ಕೇಳಿದ್ದನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ನಾಗರಾಜ್, ಆನಂತರ ಲೋಕಾಯುಕ್ತ ಇಲಾಖೆಗೆ ದೂರು ನೀಡಿದ್ದರು. ತಕ್ಷಣವೇ ಪ್ರಕರಣ ದಾಖಲಿಸಿ ಲೋಕಾಯುಕ್ತ ಅಧಿಕಾರಿಗಳು ಅಧಿಕಾರಿಯನ್ನು ಟ್ರ್ಯಾಪ್ ಮಾಡಿದ್ದಾರೆ.
