ಹೊಳೆಹೊನ್ನೂರು: ಸರಕಾರದಿಂದ ನ್ಯಾಯ ಬೆಲೆ ಅಂಗಡಿಗಳಿಗೆ ಸರಾಬರಾಜು ಆಗುವ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಆಕ್ರಮವಾಗಿ ಚೀಲದಲ್ಲಿ ತುಂಬಿಸಿಟ್ಟಿದ್ದ ಕಿರಾಣಿ ಅಂಗಡಿ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿ ಸುಮಾರು 13,129 ರೂ. ಮೌಲ್ಯದ 5 ಕ್ವಿಂಟಾಲ್, 33.5 ಕೆಜಿ ಅಕ್ಕಿ ವಶಪಡಿಸಿಕೊಂಡ ಘಟನೆ ಮಂಗಳವಾರ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಮಲ್ಲಾಪುರ ಗ್ರಾಮದ ಮಾಲತೇಶ ಹಾಗೂ ವಿರೇಶ ಎಂಬವರು ಪ್ರತ್ಯೇಕವಾಗಿ ಸರಕಾರದ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದಾರೆ. ಅಲ್ಲಿಗೆ ಸರಾಬರಾಜು ಆಗುವ ಅಕ್ಕಿ ಗ್ರಾಮದ ದಿನಸಿ ಅಂಗಡಿಯವರು ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ಆಹಾರ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಆರ್.ಅಮಿನ್, ಗ್ರಾಮಾಂತರ ಆಹಾರ ನಿರೀಕ್ಷಕ ಎ.ಟಿ.ಬಸವರಾಜ, ಪೊಲೀಸ್ ಇನ್ಸ್ ಪೆಕ್ಟರ್ ಎಂ.ಶಿವಪ್ರಸಾದ್, ಸಿಬ್ಬಂದಿ ಆನಂದ್, ಮಾಬುಸಾಬ್ ಬಿಲ್ಲಳ್ಳಿ, ಅಣ್ಣಪ್ಪ ಭಾಗವಹಿಸಿದ್ದರು.
