Trending

ಜನರೇಟರ್ ಕಳ್ಳತನ – ತಪ್ಪಿತಸ್ಥರ ಬಚಾವ್ ಮಾಡುವ ಪ್ರಯತ್ನ ಸಲ್ಲ : ಬೇಳೂರು

Spread the love

ಸಾಗರ: ತಾಯಿ-ಮಗು ಆಸ್ಪತ್ರೆಯಲ್ಲಿ ಜನರೇಟರ್ ಕಳ್ಳತನ ನಡೆದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ವಶಕ್ಕೆ ಪಡೆದು ತನಿಖೆನಡೆಯುತ್ತಿದೆ. ತಪ್ಪು ಯಾರೇ ಮಾಡಿದ್ದರೂ ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಕಾನೂನು ಪ್ರಕ್ರಿಯೆಯನ್ನು ತ್ವರಿತಗೊಳಿಸಿ. ತಪ್ಪಿತಸ್ಥರನ್ನು ಬಚಾವು ಮಾಡುವ ಪ್ರಯತ್ನ ಮಾಡಬೇಡಿ. ಇದರಿಂದ ನಾವು ಆರೋಪಿಗಳನ್ನು ಬೆಂಬಲಿಸಿದ ಆರೋಪ ಕೇಳಬೇಕಾಗುತ್ತದೆ. ಅದು ನಮಗೆ ಇಷ್ಟವಾಗುವುದಿಲ್ಲ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸ್ಪಷ್ಟಪಡಿಸಿದರು.

ತಮ್ಮ ಸ್ವಗೃಹದಲ್ಲಿ  ಮಂಗಳವಾರ ಆರೋಗ್ಯ ಇಲಾಖೆ ಅಧಿಕಾರಗಳ ಜೊತೆ ಸಭೆ ನಡೆಸಿದ ಅವರು, ಆನಂದಪುರ ಹಾಗೂ ಕಾರ್ಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 108 ವಾಹನ ಶೀಘ್ರ ಪೂರೈಕೆ ಮಾಡಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಪ್ರಸ್ತುತ 108 ವಾಹನ ದುರಸ್ತಿಯಲ್ಲಿದೆ. ಅದನ್ನು ತಕ್ಷಣ ರಿಪೇರಿ ಮಾಡಿಸಿ ಸಾರ್ವಜನಿಕ ಸೇವೆಗೆ ಕಳಿಸಬೇಕು ಎಂದು ಹೇಳಿದರು.

ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯ-ಸಿಬ್ಬಂದಿಗಳ ಕೊರತೆ ಇದೆ. ಇದರ ಜೊತೆಗೆ ಫಾರ್ಮಸಿಸ್ಟ್ ಸಹ ಕೆಲ ಕಡೆಗಳಲ್ಲಿ ಇಲ್ಲ ಎನ್ನುವ ದೂರು ಇದೆ. ಒಂದು ವಾರದಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ, ಆಸ್ಪತ್ರೆಗಳಲ್ಲಿ ಸ್ವಚ್ಛತೆ, ಮೂಲಭೂತ ಸೌಲಭ್ಯಗಳ ಕಲ್ಪಿಸಲು ತಿಳಿಸಿದರು.

ಡಾ. ನಟರಾಜ್, ಡಾ. ಸುರೇಶ್ ಎಲ್., ಪ್ರಮುಖರಾದ ಟಿ.ಪಿ.ರಮೇಶ್, ಗಣಪತಿ ಮಂಡಗಳಲೆ, ಜಯರಾಮ್ ಇನ್ನಿತರರು ಹಾಜರಿದ್ದರು.

[pj-news-ticker]