ಚಾಮರಾಜನಗರ: ವರನಟ ಡಾ ರಾಜಕುಮಾರ್ ತಂಗಿ ನಾಗಮ್ಮ (94 ವರ್ಷ) ಅವರು ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ವಯೋಸಹಜ ಅನಾರೋಗ್ಯದಿಂದ ಗಾಜನೂರಿನಲ್ಲಿ ನಿಧನ ಹೊಂದಿದರು.
ಮೃತರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ನಾಗಮ್ಮ ಅವರು ಕೆಲವು ವರ್ಷಗಳಿಂದ ಅನಾರೋಗಕ್ಕೀಡಾಗಿದ್ದರು. ನಾಗಮ್ಮ ಅವರ ಮೃತದೇಹದ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ.
ಕಳಚಿದ ಕೊಂಡಿ: ನಾಗಮ್ಮ ಅವರು ಡಾ. ರಾಜಕುಮಾರ್ ಅವರ ಸೋದರ- ಸೋದರಿಯರ ಕೊನೆಯ ಕೊಂಡಿಯಾಗಿದ್ದರು. ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರಿಗೆ ಡಾ. ರಾಜಕುಮಾರ್, ವರದರಾಜು, ಶಾರದಮ್ಮ, ನಾಗಮ್ಮ ನಾಲ್ವರು ಮಕ್ಕಳು.
