Trending

ಪತ್ರಿಕೆ ವಿಶ್ವಾಸಾರ್ಹತೆ ಕಳೆದುಕೊಳ್ಳಬಾರದು : ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು

Spread the love

ಶಿವಮೊಗ್ಗ: ಪತ್ರಿಕೆ ಒಮ್ಮೆ ವಿಶ್ವಾಸಾರ್ಹತೆಯನ್ನು ಕಳೆದು ಕೊಂಡರೆ ಜನ ಕಾಲಕ್ರಮೇಣ ಪತ್ರಿಕೆಯನ್ನು ನಂಬುವುದಿಲ್ಲ. ಹಾಗಾಗಿಯೇ ಕೆಲವೊಂದು ಇಂಗ್ಲಿಷ್ ಪತ್ರಿಕೆಗಳು, ಕನ್ನಡ ಪತ್ರಿಕೆಗಳು ದೋಣಿ ಮಗುಚದಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಯಲ್ಲಿ ದಿಕ್ಕೂಚಿ ಭಾಷಣ ಮಾಡಿದ ಅವರು, ಒಮ್ಮೆ ವಿಶ್ವಾಸ ವಿಶ್ವಾಸವನ್ನು ಕಳೆದುಕೊಂಡರೆ ಒಬ್ಬ ಪ್ರಾಮಾಣಿಕ ಪತ್ರಕರ್ತನಿಂದ ಪತ್ರಿಕೆ ನಡೆಸಲು ಸಾಧ್ಯವಾಗುವುದಿಲ್ಲ ಎಂದರು.

ಕೇವಲ ಓದುಗನ ಹಣದಿಂದ ಪತ್ರಿಕೆ ನಡೆಸುವುದು ಸಾಧ್ಯವಿಲ್ಲ. ಮಾಧ್ಯಮದ ಮಾಡೆಲ್‌ನಲ್ಲಿಯೇ ತಪ್ಪಿದೆ. ಇದನ್ನು ತಿಳಿಯದೆ ಸಾರ್ವಜನಿಕರು ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಕಳೆದ 20-30 ವರ್ಷಗಳಲ್ಲಿ ಮಾಧ್ಯಮ ಬದಲಾಗಿದೆ. ರೈತನ ಬೆಳೆ ಮತ್ತು ಪತ್ರಿಕೆ ಒಂದೇ ಆಗಿದೆ ಎಂದರು.

ಸಾಮಾನ್ಯ ಮನುಷ್ಯನಿಗೆ ಇರುವ ಅಭಿವ್ಯಕ್ತಿ ಸ್ವಾತಂತ್ರ್ಯ ಪತ್ರಕರ್ತನಿಗೆ ಇದೆ. ಮಾಧ್ಯಮ ವನ್ನು ನಾಲ್ಕನೇ ಅಂಗ ಎಂದು ಬಹಳ ಕಡೆ ಹೇಳುತ್ತಾರೆ. ಮೂರು ಅಂಗಗಳಿಗೆ ಸರ್ಕಾರದ ತೆರಿಗೆ ಹಣದಿಂದ ಸಂಬಳ ನೀಡಲಾಗುತ್ತದೆ. ಆದರೆ ಪತ್ರಕರ್ತರಿಗೆ ರಕ್ಷಣೆ ಇಲ್ಲ. ಅತಿಯಾಗಿ ಆತ ಬೆಳೆಯುವುದಕ್ಕೆ ಬಿಡುವುದಿಲ್ಲ. ಮೊದಲೆಲ್ಲ ಓದುಗರಿಗೆ ಧ್ವನಿ ಇರಲಿಲ್ಲ. ಆದರೆ ಈಗ ಓದುಗನಿಗೆ ಧ್ವನಿ ಇದೆ. ಸಾಮಾಜಿಕ ಜಾಲತಾಣಗಳಿಂದ ಇಬ್ಬರ ತಪ್ಪನ್ನು ಪ್ರಶ್ನೆ ಮಾಡುವ ಧ್ವನಿ ಬಂದಿದೆ.

ಉತ್ತರದಾಯಿತ್ವ, ಪಾರದರ್ಶ ಕತೆ ಇದೆ. ಎಷ್ಟೋ ವೈರಲ್ ಪೋಸ್ಟ್ ಗಳಿಂದ ಒಳ್ಳೆಯದು ಕೂಡ ಆಗಿದೆ. ಜಗತ್ತಿನ ಜ್ಞಾನ ಬೆರಳ ತುದಿಯಲ್ಲಿದೆ. ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರೆದಿದ್ದರೂ ಸಹ ಬೆಳಗ್ಗೆ ಪತ್ರಿಕೆ ಓದಿದರೆ ಸಮಾಧಾನ ತೃಪ್ತಿ. ಪ್ರಸ್ತುತ ಆಳವಾದ ಅಧ್ಯಯನ ಬೇಕಾಗಿಲ್ಲ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ, ಅಂಬೇಡ್ಕರ್ ನೀಡಿರುವ ಸಂವಿಧಾನ, ಇತಿಹಾಸ ಇವುಗಳ ಕುರಿತು ಸಮಾಜಕ್ಕೆ ಎಚ್ಚರಿಸುವ, ತಿಳಿಸುವ ಕೆಲಸವನ್ನು ಪತ್ರಕರ್ತರು ಮಾಡಲು ದಿಟ್ಟ ಹೆಜ್ಜೆ ಅಗತ್ಯ. ಯಾವುದೇ ಸವಾಲುಗಳು ಬಂದರೂ ಕೂಡ ದಿಟ್ಟವಾಗಿ ಎದುರಿಸುವಂತಹ ಕೆಲಸವನ್ನು ಪತ್ರಕರ್ತರು ಮಾಡಿದ್ದಾರೆ. ವಿಶೇಷವಾದ ಲೇಖನಿ ಮೂಲಕ ರಾಷ್ಟ್ರವನ್ನು ತಿದ್ದುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ.ವಿ. ಶಿವಕುಮಾರ್, ಕರ್ನಾಟಕಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ರಾಷ್ಟ್ರೀಯ ಮಂಡಳಿ ಸದಸ್ಯ ಭಂಡಿಗಡಿ ನಂಜುಂಡಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎನ್ ರವಿಕುಮಾರ್ ಉಪಸ್ಥಿತರಿದ್ದರು.

[pj-news-ticker]