Trending

ಪುಷ್ಯ ಮಳೆ ಬಿರುಸು : ಉಕ್ಕಿ ಹರಿಯುತ್ತಿರುವ ಮಾಲತಿ ನದಿ, ತೀರ್ಥಹಳ್ಳಿ – ಶೃಂಗೇರಿ ರಸ್ತೆ ಸಂಪರ್ಕ ಕಡಿತ

Spread the love

ಶಿವಮೊಗ್ಗ: ಪುಷ್ಯ ಮಳೆ ಮಲೆನಾಡಿನಲ್ಲಿ ಅಬ್ಬರಿಸುತ್ತಿದೆ. ತುಂಗಾ ನದಿಯ ಉಪ ನದಿಯಾದ ಮಾಲತಿ ನದಿಯು ಉಕ್ಕಿ ಹರಿಯುತ್ತಿರುವುದರಿಂದ ತೀರ್ಥಹಳ್ಳಿ ಮಾರ್ಗವಾಗಿ ಶೃಂಗೇರಿಗೆ ಸಾಗುವ ರಸ್ತೆ ಸಂಪರ್ಕ ಕಡಿತಗೊಂಡಿದೆ.

ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಹೊನ್ನೆತಾಳು ಗ್ರಾಮ ಪಂಚಾಯಿತಿ ಬಳಿಯ ನಾಬಳ ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿದೆ. ಇದರಿಂದ ಗ್ರಾಮಸ್ಥರಿಗೆ, ಶಾಲಾ ಮಕ್ಕಳಿಗೆ ಹಾಗೂ ಶೃಂಗೇರಿಗೆ ಹೋಗುವ ಭಕ್ತರಿಗೆ ಅನಾನುಕೂಲವಾಗಿದೆ.

ರಸ್ತೆ ಸಂಚಾರ ಸ್ಥಗಿತಗೊಂಡ ಬಗ್ಗೆ ಗುಡ್ಡೆಕೆರೆಯ ವಿದ್ಯಾರ್ಥಿನಿ ಸಮನ್ವಿ ಮಾತನಾಡಿ, “ನಾಂಬಳ ಸೇತುವೆ ಜಲಾವೃತವಾಗಿದೆ. ಇದರಿಂದ ಎಲ್ಲಾರಿಗೂ ಸಮಸ್ಯೆ ಆಗುತ್ತಿದೆ. ಮುಖ್ಯವಾಗಿ ಶಾಲಾ ಮಕ್ಕಳಿಗೆ ಹೆಚ್ಚು ಸಮಸ್ಯೆಯಾಗುತ್ತಿದೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ಇಲ್ಲದ ಕಾರಣ ಸಮಸ್ಯೆ ಆಗುತ್ತದೆ. ಗುಡ್ಡೆಕೆರೆ ಹಾಗೂ ಹೊನ್ನೆತಾಳು ಗ್ರಾಮಕ್ಕೆ ಹೋಗಬೇಕಾದ್ರೆ 30 ಕಿಲೋ ಮೀಟರ್​ ಸುತ್ತಿ ಬಳಸಿಕೊಂಡು ಹೋಗಬೇಕು. ಇಲ್ಲವಾದಲ್ಲಿ ಆಗುಂಬೆ ಅಥವಾ ಕಮ್ಮರಡಿ ಮಾರ್ಗವಾಗಿ ಹೋಗಬೇಕಿದೆ. ಇದರಿಂದ ಜನರಿಗೆ ತುಂಬ ತೂಂದರೆ ಆಗುತ್ತದೆ. ಇದಕ್ಕೆ‌ ಸೂಕ್ತ ಪರಿಹಾರ ಬೇಕೆಂದು” ಆಗ್ರಹಿಸಿದ್ದಾರೆ.

[pj-news-ticker]