ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕುರಬರಗೇರಿಯ ಶಾಲೆಯಲ್ಲಿ 4ನೇ ತರಗತಿ ವಿದ್ಯಾರ್ಥಿಯೊಬ್ಬ ಪಾಠ ಕೇಳುತ್ತಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮನೋಜ್ ಕುಮಾರ್(10) ಮೃತ ಬಾಲಕ. ಮನೋಜ್ ಕುಮಾರ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಈ ಕಾರಣದಿಂದ ಜಯದೇವ, ಅಪೋಲೋ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಇದೀಗ ಶಾಲೆಯಲ್ಲೇ ಕೊನೆಯುಸಿರೆಳೆದಿದ್ದಾನೆ.
ಮೂಲತಃ ದೊಡ್ಡಹುಂಡಿ ಗ್ರಾಮದ ದಿ. ನಾಗರಾಜು ಮತ್ತು ನಾಗರತ್ನ ದಂಪತಿ ಪುತ್ರನಾದ ಮನೋಜ್ ಕುಮಾರ್, ದೊಡ್ಡಹುಂಡಿ ಶಾಲೆಯಲ್ಲಿ 1, 2 ತರಗತಿ ವ್ಯಾಸಂಗ ಮಾಡಿ, 3ನೇ ತರಗತಿಗೆ ಕುರಬರಗೇರಿ ಶಾಲೆಗೆ ದಾಖಲಾಗಿದ್ದ ಮನೋಜ್ ಸದ್ಯ 4ನೇ ತರಗತಿ ಓದುತ್ತಿದ್ದ. ಈತನ ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
