Trending

ಬ್ಯಾಂಕ್ ವಂಚನೆ ಪ್ರಕರಣ : ಅಮೆರಿಕದಲ್ಲಿ ನೀರವ್ ಮೋದಿಯ ಸಹೋದರ ನೇಹಲ್ ಮೋದಿ ಬಂಧನ

Spread the love

ನವದೆಹಲಿ : ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ವಜ್ರ ವ್ಯಾಪಾರಿ ನೀರವ್‌ ಮೋದಿ ಸಹೋದರ ನೇಹಲ್‌ ಮೋದಿ ಅವರನ್ನು ಶನಿವಾರ ಅಮೆರಿಕದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮ್ಯಾನ್‌ಹಟನ್‌ನಲ್ಲಿನ ಕಂಪನಿಗೆ ವಂಚಿಸಿ, ₹19 ಕೋಟಿ (2.6 ದಶಲಕ್ಷ ಡಾಲರ್‌) ಮೌಲ್ಯದ ವಜ್ರ ಪಡೆದಿದ್ದಾರೆ ಎಂದು ನೇಹಲ್‌ ವಿರುದ್ಧ ಆರೋಪಿಸಲಾಗಿತ್ತು.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಗಡೀಪಾರು ಕೋರಿಕೆಯ ಮೇರೆಗೆ ನೇಹಾಲ್ ಅವರನ್ನು ಇಂದು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

[pj-news-ticker]