Trending

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಸುಟ್ಟು ಕರಕಲಾದ ಮನೆಗಳು, ಕುಕಿ ಸಮುದಾಯದ ಮೂವರು ಸಾವು

Spread the love

ಮಣಿಪುರ: ಹಿಂಸಾಚಾರದಲ್ಲಿ ಕುಕಿ ಸಮುದಾಯದ ಮೂವರು ಸಾವನ್ನಪ್ಪಿರುವ ಘಟನೆ ಮಣಿಪುರದಲ್ಲಿ ನಡೆದಿದ್ದು, ಇದು ಈಗ ಮಣಿಪುರದಲ್ಲಿ ಭದ್ರತೆಯ ಕಳವಳವನ್ನು ಉಂಟು ಮಾಡಿದೆ.

ಕಾಂಗ್ಪೋಕ್ಪಿಯಲ್ಲಿ  ಶುಕ್ರವಾರ ಮುಂಜಾನೆ ಕುಕಿ ಸಮುದಾಯದ ಮನೆಗಳ ಮೇಲೆ ದಾಳಿಯಾಗಿದ್ದು, ಮೂರು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಮನೆಗಳು ಸಂಪೂರ್ಣ ಸುಟ್ಟು ಹೋಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಈ ಕುರಿತು ಸಂಪೂರ್ಣ ತನಿಖೆಗೆ ಕುಕಿ ನಾಗರಿಕ ಸಮಾಜ ಸಂಘಟನೆಯಾದ ಕುಕಿ ಇನ್ಪಿ ಮಣಿಪುರ  ಆಗ್ರಹಿಸಿದೆ.

ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದ ದಾಳಿಯಲ್ಲಿ ಹಲವಾರು ಮನೆಗಳು ಹಾನಿಗೊಳಗಾಗಿವೆ. ಬೆಳಗ್ಗೆ 4.10ರ ಸುಮಾರಿಗೆ ಈ ದಾಳಿ ನಡೆದಿದ್ದು,ಇದನ್ನು ನಡೆಸಿರುವುದು ಯಾರು ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಈ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದೆ.

ಈ ಸಂದರ್ಭದಲ್ಲಿ ಕುಕಿ ಸಮುದಾಯದ ಸದಸ್ಯರಿಗೆ ಸೇರಿದ ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಲ್ಲಿ ಮೂರು ಮನೆಗಳು ಸಂಪೂರ್ಣ ಸುಟ್ಟುಹೋಗಿವೆ. ಈ ದಾಳಿಯಲ್ಲಿ ಏಳು ಮನೆಗಳಿಗೆ ಹಾನಿಯಾಗಿದ್ದು, ಅಪಾರ ಪ್ರಮಾಣದ ನಾಗರಿಕ ಆಸ್ತಿಗೆ ಹಾನಿಯಾಗಿದೆ ಎಂದು ಪ್ರಮುಖ ಕುಕಿ ನಾಗರಿಕ ಸಮಾಜ ಸಂಘಟನೆಯಾದ ಕುಕಿ ಇನ್ಪಿ ಮಣಿಪುರ ತಿಳಿಸಿದೆ.

[pj-news-ticker]