ಶಿವಮೊಗ್ಗ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಯಡವಾಲ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ಯಡವಾಲ ಗ್ರಾಮದ ನಿವಾಸಿ ಗೌತಮ್ ನಾಯ್ಕ್ (22) ಮತ್ತು ಶಿವಮೊಗ್ಗ ನಗರದ ಕುಂಬಾರಗುಂಡಿ ನಿವಾಸಿ ಚಿರಂಜೀವಿ (22) ಮೃತ ಯುವಕರು.
ಯಡವಾಲ ಗ್ರಾಮದ ಸ್ನೇಹಿತನ ಮನೆಗೆ ಶಿವಮೊಗ್ಗದಿಂದ 10 ಯುವಕರು ತೆರಳಿದ್ದರು. ಇತ್ತೀಚಿಗಷ್ಟೇ ಹೆರಿಗೆಯಾಗಿದ್ದ ಸ್ನೇಹಿತನ ತಂಗಿಯ ಮಗು ನೋಡಲು ಹೋಗಿದ್ದರು. ಮನೆಗೆ ಭೇಟಿ ನೀಡಿ, ಬಳಿಕ ತೋಟದಲ್ಲಿ ಪಾರ್ಟಿಗೆ ಹೋಗಿದ್ದರು.
ಪಾರ್ಟಿ ಮಧ್ಯದಲ್ಲೇ ಕೃಷಿ ಹೊಂಡದ ಬಳಿ ತೆರಳಿದ ಓರ್ವ ಯುವಕ ಕಾಲು ಜಾರಿ ಬಿದ್ದಿದ್ದಾನೆ. ಆತನ ರಕ್ಷಣೆಗೆ ಧಾವಿಸಿದ್ದ ಇನ್ನೊಬ್ಬ ಯುವಕ ಸಹ ನೀರು ಪಾಲಾಗಿದ್ದಾನೆ.
ಯುವಕರ ಮೃತದೇಹಗಳ ಮೆಗ್ಗಾನ್ ಶವಾಗಾರಕ್ಕೆ ಕಳುಹಿಸಲಾಗಿದೆ.ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
