Trending

DC ಗೇ ‘ನಿನ್ಯಾರೋ ಕೇಳೋದಕ್ಕೆ’ ಎಂದು ರೋಪ್ ಹಾಕಿದ ಸವಾರ

Spread the love

ದಾವಣಗೆರೆ: ಸಂಚಾರ ನಿಯಮ ಉಲ್ಲಂಘಿಸಿ ಒನ್ ವೇದಲ್ಲಿ ಸಂಚರಿಸಿದ್ದನ್ನು ಪ್ರಶ್ನಿಸಿದ ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ದ್ವಿಚಕ್ರ ಸವಾರನೊಬ್ಬ ಏಕವಚನದಲ್ಲಿ ಆವಾಜ್ ಹಾಕಿದ ಘಟನೆ ನಡೆದಿದೆ.

ದಾವಣಗೆರೆ ನಗರದ ಎಸ್ಎಸ್ ಲೇಔಟ್ ಬಳಿಯ ಶಾರದಾಂಬ ವೃತ್ತದ ಹಿಮೋಫಿಲಿಯಾ ಸೊಸೈಟಿ ಬಳಿ ನಡೆದ ಘಟನೆ ಕುರಿತು ಸ್ವತಃ ಜಿಲ್ಲಾಧಿಕಾರಿ ಡಾ.ಜಿ.ಎಂ.ಗಂಗಾಧರಸ್ವಾಮಿ ಅವರೇ ಮಾಧ್ಯಮಳಿಗೆ ತಿಳಿಸಿದರು.

ಜಿಲ್ಲಾಧಿಕಾರಿಗೆ ಅವಾಜ್: ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಡಾ.ಗಂಗಾಧರಸ್ವಾಮಿ ಅವರು ಸೈಕ್ಲಿಂಗ್ ಹೊರಟಾಗ ಒಮ್ಮುಖ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರ ಏಕಾಏಕಿ ನುಗ್ಗಿದ್ದಾನೆ.‌ ಸೈಕಲ್​ನಲ್ಲಿದ್ದ ಜಿಲ್ಲಾಧಿಕಾರಿಗಳು, ಈ ರೀತಿ ಒಮ್ಮುಖ ರಸ್ತೆಯಲ್ಲಿ ಬರುವುದು ತಪ್ಪು ಎಂದು ವಾಹನ ಸವಾರನಿಗೆ ಗದರಿದ್ದಾರೆ. ಈ ವೇಳೆ ಆ ವಾಹನ ಸವಾರ ‘ನೀನು ಯಾವನೋ ನನಗೆ ಕೇಳಕ್ಕೆ’ ಎಂದು ರೋಪ್ ಹಾಕಿದ್ದಾನೆ.

ಸೈಕ್ಲಿಂಗ್ ತೆರಳುವ ವೇಳೆ ಒನ್ ವೇ ಅಲ್ಲಿ ಬಂದ ದ್ವಿಚಕ್ರ ವಾಹನ ಸವಾರ ನನಗೆ ಏಕವಚನದಲ್ಲೇ ಮಾತನಾಡಿದ್ದಾ‌ನೆ. ಒಮ್ಮುಖ ರಸ್ತೆಯಲ್ಲಿ ಬರುವುದು ತಪ್ಪು ಎಂದು ಹೇಳಿದ್ದಕ್ಕೆ ‘ನೀನು ಯಾವನೋ ನನಗೆ ಕೇಳಕ್ಕೆ’ ಎಂದು ರೋಪ್ ಹಾಕಿದ. ನಾನು ಯಾರು ಎಂದು ನಿನಗೆ ಹೇಳ್ತೇನೆ ಎಂದು ವಾಹನ ಸಮೇತ ಸವಾರನ ಫೋಟೊ ಕ್ಲಿಕ್ಕಿಸಿ, ಎಸ್ಪಿ ಉಮಾಪ್ರಶಾಂತ್ ಅವರಿಗೆ ಕಳಿಸಿದ್ದೇನೆ. ಅವರು ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ. ರೋಪ್ ಹಾಕಿದ ಸವಾರನಿಗೆ ಭಾರೀ ದಂಡ ಹಾಕಿಸಿ, ವಾಹನ ಸೀಜ್ ಕೂಡ ಮಾಡಿಸುತ್ತೇನೆ. ಒಂದೆರಡು ಪ್ರಕರಣಗಳಲ್ಲಿ ಬಿಸಿ ಮುಟ್ಟಿಸಿದರೆ ಎಲ್ಲರೂ ಅಲರ್ಟ್ ಆಗ್ತಾರೆ” ಎಂದು ತಿಳಿಸಿದರು.

ಜನರಿಗೆ ಸಂದೇಶ ರವಾನಿಸಿದ ಡಿಸಿ: ರಸ್ತೆ ಸುರಕ್ಷತಾ ಸಭೆಗಳನ್ನು ಮೇಲಿಂದ ಮೇಲೆ ಮಾಡಿದ್ದರಿಂದ ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಅಪಘಾತಗಳು ಕಡಿಮೆ ಆಗಿವೆ. ಆದರೂ ಒನ್​ ವೇನಲ್ಲಿ ವಿರುದ್ಧವಾಗಿ ಕೆಲವರು ಸಂಚರಿಸುತ್ತಿದ್ದಾರೆ. ಆದ್ದರಿಂದ ದಯಮಾಡಿ ಜನತೆ ಒನ್ ವೇ ಅಲ್ಲಿ ವಾಹನ ಚಲಾಯಿಸುವುದನ್ನು ಮಾಡಬಾರದು. ಅಪಘಾತ ಆದರೆ ನಷ್ಟ ಅನುಭವಿಸಬೇಕಾಗುತ್ತದೆ. ಹೆಲ್ಮೆಟ್ ಧರಿಸದೇ ಇರುವುದು ಕಂಡು ಬಂದಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಡಿಸಿ ಮನವಿ ಮಾಡಿದರು.

[pj-news-ticker]