ಬೆಂಗಳೂರು : ಚಲಿಸುತ್ತಿದ್ದ ಸ್ಕೂಟರ್ ಮೇಲೆ ಮರದ ಕೊಂಬೆ ಬಿದ್ದು ಸವಾರನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ. ಸವಾರ ಅಕ್ಷಯ್ ಎಂಬಾತ ಕೋಮಾಗೆ ತಲುಪಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.
ಭಾನುವಾರ ಮಧ್ಯಾಹ್ನ 1:15ರ ಸುಮಾರಿಗೆ ಬನಶಂಕರಿಯ ಬ್ರಹ್ಮಚೈತನ್ಯ ಮಂದಿರದ ಬಳಿ ಅಕ್ಷಯ್, ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ. ಈ ವೇಳೆ ಮರದ ಕೊಂಬೆ ಬಿದ್ದ ಪರಿಣಾಮ ಆತನ ತಲೆಗೆ ತೀವ್ರವಾಗಿ ಗಾಯವಾಗಿದ್ದು, ಸ್ಥಳೀಯರು ತಕ್ಷಣ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ವೈದ್ಯರು ತಪಾಸಣೆ ನಡೆಸಿದಾಗ ತಲೆಗೆ ಭಾರಿ ಪೆಟ್ಟಾಗಿತ್ತು. ಈ ಬಗ್ಗೆ ವಿವರ ನೀಡಿರುವ ನ್ಯೂರೋ ಸರ್ಜನ್ ಡಾ.ಶ್ರೀದತ್, ಅಕ್ಷಯ್ ತಲೆ ಮೇಲೆ ಕೊಂಬೆ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ತಲೆಗೆ ಬುರುಡೆಗೆ ತೀವ್ರವಾಗಿ ಪೆಟ್ಟು ಬಿದಿದ್ದೆ. ಮೊನ್ನೆ ಎಮರ್ಜೆನ್ಸಿ ಬಂದ ತಕ್ಷಣ ಅಪರೇಷನ್ ಮಾಡಿದ್ದೆವು. ಸದ್ಯಕ್ಕೆ ಕಂಡಿಷನ್ ತುಂಬಾ ಕ್ರಿಟಿಕಲ್ ಆಗಿದೆ. ಅಂಗಾಂಗಗಳು ಕೆಲಸ ಮಾಡಲು ಮೆಡಿಸನ್ ನೀಡಲಾಗುತ್ತಿದೆ. ಕಂಡಿಷನ್ ತುಂಬಾ ಕ್ರಿಟಿಕಲ್ ಆಗಿದೆ. ನಾವು ಪ್ರಯತ್ನ ಮಾಡುತ್ತಿದ್ದೇವೆ. ಮೆದುಳಿಗೆ ದೊಡ್ಡ ಪೆಟ್ಟು ಬಿದಿದ್ದೆ. ಇಷ್ಟು ಬೇಗ ಏನೂ ಹೇಳುವುದಕ್ಕೆ ಆಗುವುದಿಲ್ಲ. ಸದ್ಯ ಕೋಮಾಕ್ಕೆ ಹೋಗಿದ್ದಾರೆ. ಬ್ಲೀಡಿಂಗ್ ಕಂಟ್ರೋಲ್ ಮಾಡೋದಕ್ಕೆ ಅಪರೇಷನ್ ಮಾಡಿದ್ದೇನೆ ಎಂದರು.
ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದ ಅಕ್ಷಯ್, ಭಾನುವಾರ ತನ್ನ ತಂದೆಯ ಬರ್ತ್ಡೇ ಇದ್ದುದ್ದರಿಂದ ಮಟನ್ ಖರೀದಿಸಲು ಮನೆಯಿಂದ ಹೊರ ಬಂದಿದ್ದರು. ಸ್ಕೂಟರ್ನಲ್ಲಿ ತೆರಳುವಾಗ ಈ ಅವಘಡ ಸಂಭವಿಸಿದ್ದು, ಗಾಯಗೊಂಡಿರುವ ಅಕ್ಷಯ್ಗೆ 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ತಲೆ ಬುರುಡೆಯಲ್ಲಿ ಸುಮಾರು 10ಕ್ಕೂ ಅಧಿಕ ಬಿರುಕುಗಳುಂಟಾಗಿದ್ದು, ಅಕ್ಷಯ್ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.
