Trending

ಕೊಂಡ ಹಾಯುವಾಗ ಆಯತಪ್ಪಿ ಕೆಂಡದಲ್ಲಿ ಬಿದ್ದ ಅರ್ಚಕ – ಗಂಭೀರ ಗಾಯ

Spread the love

ರಾಮನಗರ: ಕೊಂಡ ಹಾಯುವಾಗ ಅರ್ಚಕರೊಬ್ಬರು ಆಯತಪ್ಪಿ ಕೆಂಡದಲ್ಲಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೋಡಿಹಳ್ಳಿ ಸಮೀಪ ಇರುವ ಪಟ್ಟದಾಲಮ್ಮ ದೇವರ ಕೊಂಡೋತ್ಸವದಲ್ಲಿ ಈ ಘಟನೆ ನಡೆದಿದೆ. ಭಾನುವಾರ ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ಅರ್ಚಕ ಗಂಭೀರವಾಗಿ ಗಾಯಗೊಂಡಿದ್ದಾರೆ. 50 ವರ್ಷದ ಕರಿಯಪ್ಪ ಗಾಯಗೊಂಡಿರುವ ಅರ್ಚಕ. ಗ್ರಾಮದ ಪಟ್ಟದಾಲಮ್ಮ ದೇವಿಯ ಕೊಂಡ ಹಾಯುವಾಗ ಈ ಘಟನೆ ಜರುಗಿದೆ. ಗಾಯಾಳು ಅರ್ಚಕನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ.

ಇತಿಹಾಸ ಪ್ರಸಿದ್ಧ ದೇಗುಲ: ಪಟ್ಟದಾಲಮ್ಮ ದೇಗುಲ ಇತಿಹಾಸ ಪ್ರಸಿದ್ಧ ದೇವಾಲಯ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪ್ರತಿ ವರ್ಷ ಕೊಂಡೋತ್ಸವಕ್ಕೆ ಆಗಮಿಸುತ್ತಾರೆ. ಈ ದೇಗುಲದಲ್ಲಿ ಯಾವುದೇ ಹರಕೆ ಇಟ್ಟುಕೊಂಡರೂ ಕೂಡ ಈಡೇರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಅದರಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಕೂಡ ಆಗಮಿಸುತ್ತಾರೆ. ಪ್ರತಿ ವರ್ಷದಂತೆ ಇಂದು ನಡೆದ ಕೊಂಡೋತ್ಸವ ಕಾರ್ಯಕ್ರಮದಲ್ಲಿ ಅರ್ಚಕರು ಆಯತಪ್ಪಿ ಕೊಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

[pj-news-ticker]