Trending

ಪೊಲೀಸ್​ ಠಾಣೆ ಸಮೀಪವೇ ಪತ್ನಿ ಕೊಂದು ಪತಿ ಪರಾರಿ

Spread the love

ಚಾಮರಾಜನಗರ: ಕೌಟಂಬಿಕ ಕಲಹ ಮತ್ತು ವಿವಾಹೇತರ ಸಂಬಂಧದ ಶಂಕೆ ಹಿನ್ನೆಲೆ ಪತಿ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಚಾಮರಾಜನಗರ ಪಟ್ಟಣ ಠಾಣೆ ಸಮೀಪ ನಡೆದಿದೆ.

ಚಾಮರಾಜನಗರದ ಸೋಮವಾರಪೇಟೆ ನಿವಾಸಿ ವಿದ್ಯಾ ಕೊಲೆಯಾದ ಪತ್ನಿ. ಗಿರೀಶ್ ಎಂಬಾತ ಕೊಲೆ ಮಾಡಿದ ಪತಿ. ಅನೈತಿಕ ಸಂಬಂಧದ ಶಂಕೆ ಮತ್ತು ಆಗಾಗ ಇವರಿಬ್ಬರ ನಡುವೆ ಕೌಟಂಬಿಕ ಕಲಹ ನಡೆಯುತ್ತಿತ್ತು. ಇಂದು ಗಲಾಟೆ ವಿಕೋಪಕ್ಕೆ ತಿರುಗಿ ಪತಿ ಗಿರೀಶ್​ ಕುಡಗೋಲಿನಿಂದ ಮನಬಂದಂತೆ ಹಲ್ಲೆ ಮಾಡಿದ್ದು, ತೀವ್ರವಾಗಿ ಗಾಯಗೊಂಡ ವಿದ್ಯಾ ಆಸ್ಪತ್ರೆಗೆ ರವಾನೆ ಮಾಡಿತರಾದರೂ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ.

ಪತ್ನಿ ವಿದ್ಯಾ ಕಾಣೆಯಾಗಿದ್ದಾಳೆ ಎಂದು ಪತಿ ಗಿರೀಶ್ ಪತ್ನಿ ದೂರು ಕೊಟ್ಟಿದ್ದರಿಂದ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪಟ್ಟಣ ಠಾಣೆ ಪೊಲೀಸರು ನಾಪತ್ತೆಯಾಗಿದ್ದ ಪತ್ನಿ ವಿದ್ಯಾಳನ್ನು ಪತ್ತೆ ಹಚ್ಚಿದ್ದ ವೇಳೆ ತಾನು ಗಂಡನ ಮನೆಗೂ ಹೋಗುವುದಿಲ್ಲ, ಪಾಲಕರ ಮನೆಗೂ ಹೋಗುವುದಿಲ್ಲ ಎಂದು ತಿಳಿಸಿದ್ದರಿಂದ ವಿದ್ಯಾಳನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಪೊಲೀಸರು ಕಳುಹಿಸಿಕೊಟ್ಟಿದ್ದರು.

ಇದಾದ ಬಳಿಕ ಸಾಂತ್ವನ ಕೇಂದ್ರಕ್ಕೂ ತೆರಳಿ ಪತಿ ಗಿರೀಶ್ ಗಲಾಟೆ ಮಾಡುತ್ತಿದ್ದರಿಂದ ಮತ್ತೇ ವಿದ್ಯಾ ಪೊಲೀಸರಿಗೆ ದೂರು ಕೊಟ್ಟಿದ್ದರು. ಅದರಂತೆ, ಇಂದು ಪತಿ – ಪತ್ನಿ ಇಬ್ಬರನ್ನು ಪಟ್ಟಣ ಠಾಣೆ ಪೊಲೀಸರು ಕರೆಸಿ ಬುದ್ದಿವಾದ ಹೇಳಿ, ಪತ್ನಿಗೆ ಇಷ್ಟವಿಲ್ಲದಿದ್ದರಿಂದ ಕೌಟಂಬಿಕ ನ್ಯಾಯಾಲಯದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿ ಪತಿ ಗಿರೀಶ್​ಗೆ ತೊಂದರೆ ಕೊಡದಂತೆ ಎಚ್ಚರಿಕೆ ಕೊಟ್ಟಿದ್ದರು. ಪೊಲೀಸ್ ಠಾಣೆಯಿಂದ ವಿದ್ಯಾ ಮಹಿಳಾ ಸಾಂತ್ವನ ಕೇಂದ್ರಕ್ಕೆ ತೆರಳುವಾಗ ಹಿಂಬಾಲಿಸಿ ಬಂದ ಪತಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಚಾಮರಾಜನಗರ ಎಸ್​ಪಿ ಡಾ‌.ಬಿ.ಟಿ.ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾದ ಪತಿ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಚಾಮರಾಜನಗರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

[pj-news-ticker]