Trending

ಸಚಿವ ಶರಣಪ್ರಕಾಶ್ ಪಾಟೀಲ್ ಗೆ ತರಾಟೆಗೆ ತೆಗೆದುಕೊಂಡ ಕೈ ಕಾರ್ಯಕರ್ತ : ಅಷ್ಟಕ್ಕೂ ಆಗಿದ್ದೇನು?

Spread the love

ರಾಯಚೂರು: ಸಚಿವ ಶರಣ ಪ್ರಕಾಶ್ ಪಾಟೀಲ್​ಗೆ ಕಾಂಗ್ರೆಸ್ ಕಾರ್ಯಕರ್ತ ತರಾಟೆಗೆ ತೆಗೆದುಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ನಡೆದಿದೆ.

ರಾಯಚೂರು ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಲಿಂಗಸುಗೂರಿಗೆ ಭೇಟಿ ನೀಡಿದ್ದು, ಈ ವೇಳೆ ಕಾರ್ಯಕರ್ತನೋರ್ವ ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರುತ್ತೀರಿ ಎಂದು ಪ್ರಶ್ನಿಸಿದ್ದಾನೆ.

ಬಳಿಕ ಸಚಿವರು, ನೀವ್ಯಾರು ಕೇಳೋಕೆ ಎಂದು ಗರಂ ಆಗಿದ್ದಾರೆ. ಆಗ ವ್ಯಕ್ತಿ ನಾನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ ಎಂದು ಉತ್ತರಿಸಿದ್ದಾನೆ. ನಂತರ ಶರಣಪ್ರಕಾಶ್ ಪಾಟೀಲ್, ನಾನ್​ಸೆನ್ಸ್​ ರೀತಿ ಮಾತನಾಡಬೇಡ ಎಂದು ಹೇಳಿ ತೆರಳಿದರು.

[pj-news-ticker]