ಶಿವಮೊಗ್ಗ : ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಉಗ್ರರ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ಅವರ ವಿಜಯ ನಗರದಲ್ಲಿರುವ ಮನೆಗೆ ಭೇಟಿ ನೀಡಿ ತಾಯಿ ಸುಮತಿ, ಸಹೋದರಿ ರೂಪ ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಅವರು, “ಈ ಸಂದರ್ಭದಲ್ಲಿ ಮಂಜುನಾಥ್ ಅವರ ಕುಟುಂಬಸ್ಥರ ಜೊತೆ ನಾವು ನಿಲ್ಲಬೇಕಿದೆ. ಇಂದು ಸಂಜೆ ಆರು ಗಂಟೆಗೆ ಕಾಶ್ಮೀರದಿಂದ ಮಂಜುನಾಥ್ ಅವರ ಮೃತದೇಹ ಹೊರಡಲಿದೆ. ನಾನು ಚೀಫ್ ಸೆಕ್ರೆಟರಿ ಜೊತೆಗೂ ಮಾತನಾಡುತ್ತಿದ್ದೇನೆ. ಅವರು ಪ್ರವಾಸಕ್ಕೆಂದು ಫ್ಯಾಮಿಲಿ ಜೊತೆ ಹೊರಡಿದ್ದರು. ನಾನು ಸಂತೋಷ್ ಲಾಡ್ ಅವರೊಂದಿಗೂ ಮಾತನಾಡಿದ್ದೇನೆ. ಧೈರ್ಯವಾಗಿರಿ, ನಾನು ಎಲ್ಲರನ್ನೂ ಕರೆತರುತ್ತೇನೆ ಎಂದು ಅವರು ಹೇಳಿದ್ದಾರೆ” ಎಂದರು.
