Trending

ಹಿರಿದಾಯಿತು ‘ಮಜಾ ಟಾಕೀಸ್’ ಕುಟುಂಬ : ತಂಡದಲ್ಲಿ ಕುರಿ ಪ್ರತಾಪ್, ತುಕಾಲಿ ಸಂತೋಷ್, ಭಟ್ರು

Spread the love

ಮಜಾ ಟಾಕೀಸ್’ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರವರಿ 1ರಿಂದ ‘ಮಜಾ ಟಾಕೀಸ್’ ಆರಂಭ ಆಗಲಿದೆ ಎಂದು ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ರಿಲೀಸ್ ಮಾಡಿದೆ. ಸೃಜನ್ ಲೋಕೇಶ್ ನೇತೃತ್ವದಲ್ಲಿ ಮೂಡಿ ಬರುತ್ತಿರುವ ಈ ಶೋನ ಪಾತ್ರವರ್ಗ ಕೂಡ ಹಿರಿದಾಗಿದೆ. ತುಕಾಲಿ ಸಂತೋಷ್, ಯೋಗರಾಜ್ ಭಟ್ ಮೊದಲಾದವರು ತಂಡ ಸೇರಿರೋದು ವಿಶೇಷ. ಈ ಮೊದಲನಿಂದಲೂ ಇದ್ದ ಕುರಿ ಪ್ರತಾಪ್ ಶೋನಲ್ಲಿ ಮುಂದುವರಿದಿದ್ದಾರೆ.

ಈ ಮೊದಲು ‘ಮಜಾ ಟಾಕೀಸ್​’ನಲ್ಲಿ ಇಂದ್ರಜಿತ್ ಲಂಕೇಶ್ ಅವರು ವೇದಿಕೆ ಮೇಲೆ ಕುಳಿತಿರುತ್ತಿದ್ದರು. ಎಲ್ಲ ಜೋಕ್​ಗೆ ನಗೋದು ಅವರ ಕೆಲಸ ಆಗಿತ್ತು. ಅಲ್ಲದೆ, ಆಗಾಗ ಕಮೆಂಟ್​ಗಳನ್ನು ಕೂಡ ಪಾಸ್ ಮಾಡುತ್ತಿದ್ದರು. ಈ ಬಾರಿ ಆ ಜಾಗವನ್ನು ಯೋಗರಾಜ್ ಭಟ್ ತುಂಬುವ ಸೂಚನೆ ಸಿಕ್ಕಿದೆ. ಇದಲ್ಲದೆ ಪಾತ್ರವರ್ಗ ಕೂಡ ಹಿರಿದಾಗಿದೆ.

ಈ ಬಾರಿ ಮಜಾ ಟಾಕೀಸ್​ನಲ್ಲಿ ತುಕಾಲಿ ಸಂತೋಷ್, ಕುರಿ ಪ್ರತಾಪ್, ಬಿಗ್ ಬಾಸ್ ಪ್ರಿಯಾಂಕಾ, ವಿನೋದ್ ಗೊಬ್ಬರಗಾಲ ಸೇರಿ ಅನೇಕರು ಇರಲಿದ್ದಾರೆ. ಈ ಮೂಲಕ ಮನರಂಜನೆ ಕೂಡ ಡಬಲ್ ಆಗುವ ಸೂಚನೆ ಸಿಕ್ಕಿದೆ. ಈ ಬಾರಿ ಯಾವ ರೀತಿಯ ಸ್ಕ್ರಿಪ್ಟ್​ಗಳೊಂದಿಗೆ ಸೃಜನ್ ಬರುತ್ತಾರೆ ಎಂಬ ಕುತೂಹಲ ಇದೆ.

ಸದ್ಯ ‘ಬಿಗ್ ಬಾಸ್ ಕನ್ನಡ ಸೀಸನ್ 11’ ನಡೆಯುತ್ತಿದೆ. ಈ ತಿಂಗಳಾಂತ್ಯಕ್ಕೆ (ಜನವರಿ 25-26) ಈ ಶೋನ ಫಿನಾಲೆ ನಡೆಯಲಿದೆ. ಇದಾದ ಬಳಿಕ ‘ಮಜಾ ಟಾಕೀಸ್’ ಆರಂಭ ಆಗಲಿದೆ.

[pj-news-ticker]