Trending

ಆನಂದಪುರ : ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Spread the love

ಆನಂದಪುರ: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದ ಶಿಕ್ಷಕರೊಬ್ಬರು ಹೃದಯಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

ಆನಂದಪುರ ಸಮೀಪದ ನರಸೀಪುರ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕ ಮಂಜುನಾಥ್( 57) ಮೃತಪಟ್ಟ ಶಿಕ್ಷಕ. ಇಂದು ಬೆಳಗ್ಗೆ  ಜಂಬೆಕೊಪ್ಪ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸಲು ಬೈಕ್ ನಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

ಮಂಜುನಾಥ್ ಅವರು ಹೆಂಡತಿ, ಓರ್ವ ಪುತ್ರ, ಪುತ್ರಿ, ಹಾಗೂ ಅಪಾರ ಶಿಕ್ಷಕ ವರ್ಗದವರನ್ನು ಅಗಲಿದ್ದಾರೆ. ಶಿಕ್ಷಕ ಮಂಜುನಾಥ್ ಮನೆಗೆ ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನುಡಿದಿದ್ದಾರೆ.

ಇತ್ತೀಚೆಗೆ ಸಾಗರ ತಾಲೂಕು ಸಿರಿವಂತೆಯ ಸರ್ಕಾರಿ ಶಾಲೆಯ ಶಿಕ್ಷಕಿ ಶಿವಮೊಗ್ಗದ ಡಯಟ್ ನಲ್ಲಿ ನಡೆಯುವ ತರಬೇತಿಗಾಗಿ ತೆರಳುವ ಅವಸರದಲ್ಲಿ ಅಪಘಾತವಾಗಿ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿದೆ.

[pj-news-ticker]