ಶಿವಮೊಗ್ಗ: ಪೇಟ್ರೋಲ್ ಹಾಕುವಾಗ ಓಮಿನಿ ವಾಹನವೊಂದು ಹೊತ್ತಿ ಉರಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನಾಪುರದಲ್ಲಿ ನಡೆದಿದೆ.
ಮಹಮ್ಮದ್ ಸಾನಾವುಲ್ಲ ಎಂಬುವರಿಗೆ ಸೇರಿದ ಓಮಿನಿ ಕಾರು ತೀರ್ಥಹಳ್ಳಿ ರಸ್ತೆಯ ಹೊನ್ನಾಪುರ ಗ್ರಾಮದ ಬಳಿ ಹೊತ್ತಿ ಉರಿದಿದೆ. ಓಮಿನಿ ಮಂಗಳೂರು ಆಸ್ಪತ್ರೆಯಿಂದ ಶಿವಮೊಗ್ಗಕ್ಕೆ ಬರುತ್ತಿತ್ತು. ತೀರ್ಥಹಳ್ಳಿ ರಸ್ತೆಯಲ್ಲಿ ಪೆಟ್ರೋಲ್ ಖಾಲಿಯಾಗಿತ್ತು ಎಂದು ಭರ್ತಿ ಮಾಡುತ್ತಿದ್ದ ವೇಳೆ ಹೊತ್ತಿ ಉರಿದಿದೆ.
ಓಮಿನಿಯಲ್ಲಿದ್ದ ಐದು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕ್ಷಣಾರ್ಧದಲ್ಲೇ ಓಮಿನಿ ಹೊತ್ತಿ ಉರಿದ ಹಿನ್ನಲೆ ಓರ್ವರಿಗೆ ಸಣ್ಣಪುಟ್ಟ ಗಾಯವಾಗಿದೆ.
ಅಗ್ನಿಶಾಮಕದಳ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
