Trending

ಆನಂದಪುರ ಬಳಿ ಭೀಕರ ಅಪಘಾತ… ಇಬ್ಬರು ಸ್ಥಳದಲ್ಲೇ ಮೃತ್ಯು

Spread the love

ಆನಂದಪುರ: ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಆನಂದಪುರ ಸಮೀಪದ ಗೌತಮಪುರದಲ್ಲಿ ಇಂದು ಸಂಭವಿಸಿದೆ.

ತ್ಯಾಗರ್ತಿಯ ಬೆಳಂದೂರು ಗ್ರಾಮದ ವಾಸಪ್ಪ,(70) ಜಯನಗರದ ಸತೀಶ್(40) ಮೃತ ದುರ್ದೈವಿಗಳು.

ತ್ಯಾಗರ್ತಿ ಕಡೆಯಿಂದ ಆನಂದಪುರ ಕಡೆಗೆ ಬರುತ್ತಿದ್ದ ಬೈಕಿಗೆ ಆನಂದಪುರದಿಂದ ಶಿಕಾರಿಪುರ ಕಡೆಗೆ ತೆರಳುತ್ತಿದ್ದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

[pj-news-ticker]