Trending

ಕರ್ನಾಟಕ ಪೊಲೀಸರಿಗೆ ಗುಡ್ ನ್ಯೂಸ್ : 20 ಲಕ್ಷದಿಂದ 50 ಲಕ್ಷಕ್ಕೆ ವಿಮಾ ಯೋಜನೆ ಮೊತ್ತ ಹೆಚ್ಚಳ

Spread the love

ಬೆಂಗಳೂರು : ಪೊಲೀಸರಿಗೆ ವಿಶೇಷ ಗುಂಪು ವಿಮಾ ಯೋಜನೆ ಮೊತ್ತವನ್ನು 20 ಲಕ್ಷದಿಂದ ರೂ. 50 ಲಕ್ಷಕ್ಕೆ ಹೆಚ್ಚಳ ಮಾಡಿ ಶುಕ್ರವಾರ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಂದ ಆದೇಶ ಹೊರಡಿಸಿದೆ. ಆ ಮೂಲಕ ಕರ್ನಾಟಕದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ.

2023ರಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯಂದು ಗುಂಪು ವಿಮಾ ಮೊತ್ತವನ್ನು ಹೆಚ್ಚಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆ ಮೂಲಕ ಅಧಿಕಾರಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಸಕಾರಾತ್ಮಕ ಬೆಂಬಲವನ್ನು ವ್ಯಕ್ತಪಡಿಸಲಾಗಿತ್ತು.

ಇದೀಗ ಭರವಸೆಯಂತೆ ಸರ್ಕಾರ ವಿಶೇಷ ಗುಂಪು ವಿಮಾ ಯೋಜನೆ ಮೊತ್ತ ಹೆಚ್ಚಳ ಮಾಡಿದೆ. ಕರ್ತವ್ಯದಲ್ಲಿರುವಾಗ ಪೊಲೀಸರು ಮೃತಪಟ್ಟರೆ ಈ ವಿಶೇಷ ಗುಂಪು ವಿಮಾ ನೀಡಲಾಗುತ್ತದೆ. ಫಾಲೋವರ್, ಪಿಸಿಯಿಂದ ಡಿಜಿ & ಐಜಿಪಿವರೆಗೂ ಅನ್ವಯವಾಗಲಿದೆ.

ಪೊಲೀಸ್ ಅಧಿಕಾರಿಗಳು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುತ್ತಾರೆ. ಹಾಗಾಗಿ ಅವರು ಮತ್ತು ಅವರ ಕುಟುಂಬಗಳ ಕಲ್ಯಾಣವನ್ನು ಪರಿಗಣಿಸುವುದು ಮುಖ್ಯವಾಗುತ್ತದೆ. ಹಾಗಾಗಿ ಕಾನೂನು ಸುವ್ಯವಸ್ಥೆಯನ್ನು ರಕ್ಷಿಸಲು ನಿರಂತರವಾಗಿ ಶ್ರಮಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಕುಟುಂಬದ ಏಳಿಗೆಗೆ ಸರ್ಕಾರ ಪ್ರಥಮ ಆದ್ಯತೆ ಆಗಿದೆ.

 

[pj-news-ticker]