ಭದ್ರಾವತಿ: ಕಳೆದ 20 ವರ್ಷಗಳಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯನಾಗಿ ಸಮಾಜದ ಅಭಿವೃದ್ಧಿ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ನನ್ನನ್ನು ಹಾಗೂ ನನ್ನ ತಂಡವನ್ನು ನಾಳೆ ನಡೆಯಲಿರುವ ತಾಲೂಕು ಘಟಕದ ಚುನಾವಣೆಯಲ್ಲಿ ಗೆಲ್ಲಿಸುವಂತೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್. ವಾಗೀಶ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.೨೧ರಂದು ಬೆಳಗ್ಗೆ ೮ ರಿಂದ ೫ ರವರೆಗೆ ನಗರದ ತಾಲೂಕು ಕಚೇರಿ ರಸ್ತೆಯ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಘಟಕದ ಚುನಾವಣೆ ನಡೆಯಲಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಮತವನ್ನು ಚಲಾಯಿಸಿ ಗೆಲ್ಲಿಸಲು ಕೋರಿದರು.
ನಮ್ಮ ತಂಡ ಗೆಲುವು ದಾಖಲಿಸಿದ್ದಲ್ಲಿ ಮಹಾಸಭಾದ ಕಚೇರಿ ಸ್ಥಾಪನೆ, ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಆರ್ಥಿಕ ಸಹಕಾರ, ೨ಎ ಮೀಸಲಾತಿ, ರಾಜಕೀಯ ಪ್ರಾತಿನಿಧ್ಯಕ್ಕಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ನಿರ್ದೇಶಕರ ಸ್ಥಾನಕ್ಕೆ ಕೀರ್ತಿಕುಮಾರ್, ಬಿ.ಚನ್ನಪ್ಪ, ದಯಾನಂದ್ ಬಿ.ಆರ್, ಭರತ್ ಬಿ.ಎಸ್, ಮಹದೇವಪ್ಪ ಎಂ, ಎಚ್.ಮಂಜುನಾಥ, ಯೋಗೇಶ್, ರುದ್ರೇಶ ಆರ್.ಎನ್, ಬಿ.ಎನ್.ಲಂಬೋಧರ, ವಾಗೀಶ್ಬಿ.ಓ, ಸೋಮಶೇಖರ ಸ್ಪರ್ಧಿಸಿದ್ದಾರೆ. ಮಹಿಳಾ ನಿರ್ದೇಶಕರ ಸ್ಥಾನಕ್ಕೆ ಕವಿತ ಬಿ.ಪಿ., ಕಾವೇರಮ್ಮ, ನಾಗರತ್ನಮ್ಮ ಕೆ.ಎಸ್., ನಂದಿನಿ ಮಲ್ಲಿಕಾರ್ಜುನ, ಪೂರ್ಣಿಮಾ ಎಸ್., ರಾಜೇಶ್ವರಿ, ರೂಪನಾಗರಾಜ್ ಎಲ್.ಎಸ್ ಸ್ಪರ್ಧಿಸಿದ್ದು, ಸಮಾಜ ಬಾಂಧವರು ಈ ತಂಡಕ್ಕೆ ಮತನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಘಟಕದ ಮಾಜಿ ಅಧ್ಯಕ್ಷರುಗಳಾದ ಸಿದ್ಧಲಿಂಗಯ್ಯ, ಮಹೇಶ್ ಕುಮಾರ್, ಸಮಾಜದ ಮುಖಂಡರುಗಳಾದ ಅಡವೀಶಯ್ಯ, ಸತೀಶ್, ಬಸವರಾಜಯ್ಯ ಸೇರಿದಂತೆ ಇನ್ನಿತರರು ಉಪಸ್ಥಿರಿದ್ದರು.

