Trending

250 ಗ್ರಾಂ ನಕಲಿ ಚಿನ್ನದ ಬಿಲ್ಲೆಗಳನ್ನು ಕೊಟ್ಟು ₹10 ಲಕ್ಷ ವಂಚನೆ, ಆರೋಪಿ ಸೆರೆ

Spread the love

ಚಿತ್ರದುರ್ಗ: ವ್ಯಕ್ತಿಯೊಬ್ಬರಿಗೆ 250 ಗ್ರಾಂ ತೂಕದ ನಕಲಿ ಚಿನ್ನದ ಬಿಲ್ಲೆಗಳನ್ನು ನೀಡಿ 10 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ್ದ ಆರೋಪಿಯನ್ನು ಜಿಲ್ಲೆಯ ನಾಯಕನಹಟ್ಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತೆಲಂಗಾಣದ ಬೊಡಿಗೆ ಶ್ರೀನಿವಾಸ್ ಎಂಬವರು ಮೋಸ ಹೋದವರು. ಡಿ.ರಾಜು (39) ಎಂಬಾತನೇ ಮೋಸ ಮಾಡಿದ ಆರೋಪಿ.

ಸೆಪ್ಟಂಬರ್​ 26ರಂದು ಚಳ್ಳಕೆರೆ ತಾಲೂಕಿನ ಕೊರಡಿಹಳ್ಳಿ ಗ್ರಾಮದ ಬಳಿಯ ಚಿನ್ನಹಗರಿ ಹಳ್ಳಕ್ಕೆ ಹೋಗುವ ರಸ್ತೆಗೆ ಶ್ರೀನಿವಾಸ್ ಅವರನ್ನು ಕರೆಸಿಕೊಂಡು ಹಣ ಪಡೆದು ಮೋಸ ಮಾಡಲಾಗಿತ್ತು.

​ಆರೋಪಿ 250 ಗ್ರಾಂ ತೂಕದ ನಕಲಿ ಚಿನ್ನದ ಬಿಲ್ಲೆಗಳನ್ನು ಕೊಟ್ಟು ಅವು ನಿಜವಾದ ಚಿನ್ನದ ಬಿಲ್ಲೆಗಳೆಂದು ನಂಬಿಸಿದ್ದ. ಅಲ್ಲದೆ, 10 ಲಕ್ಷ ರೂಪಾಯಿ ಹಣ ಮತ್ತು ಒಂದು ಮೊಬೈಲ್ ಫೋನ್​ ತೆಗೆದುಕೊಂಡು ಮೋಸ ಮಾಡಿದ್ದ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಶ್ರೀನಿವಾಸ್ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು‌. ತನಿಖೆ ಕೈಗೊಂಡ ಪೊಲೀಸರು ಆರೋಪಿ ಡಿ.ರಾಜುನನ್ನು ಪತ್ತೆ ಮಾಡಿ, ಆತನಿಂದ ಒಟ್ಟು 4,50,000 ರೂಪಾಯಿ ನಗದು ಹಣ, ಒಂದು ಮೊಬೈಲ್ ಪೋನ್ ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣ ಭೇದಿಸಿದ ನಾಯಕನಹಟ್ಟಿ ಠಾಣೆ ಪಿಎಸ್‌ಐ ಪಾಂಡುರಂಗ ಜಿ. ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಶಾಲ್ ಚೌಕ್ಷೆ ಶ್ಲಾಘಿಸಿದ್ದಾರೆ.

 

 

[pj-news-ticker]