ಹಾಸನ : ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಹಾಸನದ ಶ್ರೀ ಹಾಸನಾಂಬೆ ದೇವಿ ದರ್ಶನೋತ್ಸವ-2026 ಭರದಿಂದ ಸಾಗುತ್ತಿದ್ದು, ಕೇವಲ ಏಳು ದಿನಗಳಲ್ಲಿ 16 ಲಕ್ಷಕ್ಕೂ ಅಧಿಕ ಭಕ್ತಾದಿಗಳು ದೇವಿಯ ದರ್ಶನ ಪಡೆದಿದ್ದಾರೆ.
ದರ್ಶನೋತ್ಸವದ ಮೂಲಕ ದೇವಾಲಯಕ್ಕೆ ಇದುವರೆಗೆ ಬರೋಬ್ಬರಿ 13 ಕೋಟಿ ರೂ.ಗೂ ಹೆಚ್ಚು ಆದಾಯ ಹರಿದುಬಂದಿದೆ ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ತಿಳಿಸಿದ್ದಾರೆ.
ದರ್ಶನ ಪಡೆಯಲು ತಗುಲುವ ಸಮಯವನ್ನು ಕಡಿಮೆ ಮಾಡಲು ಆಡಳಿತ ಮಂಡಳಿ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದು, ದೇವಿಗೆ ಸಲ್ಲಿಸುವ ನೈವೇದ್ಯದ ಸಮಯವನ್ನು ಕಡಿತಗೊಳಿಸಲಾಗುತ್ತಿದೆ. ಪ್ರೋಟೋಕಾಲ್ ಹಾಗೂ ಶಿಷ್ಟಾಚಾರದಲ್ಲಿ ಬರುವ ಗಣ್ಯರು ಮತ್ತು ವಿಐಪಿಗಳ ಸಂಖ್ಯೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
“ಸಾಮಾನ್ಯ ಭಕ್ತರು ಸರತಿ ಸಾಲಿನಲ್ಲಿ ತಾಳ್ಮೆಯಿಂದ ನಿಲ್ಲಲು ಮಾನಸಿಕವಾಗಿ ತಯಾರಾಗಿ ಬನ್ನಿ, ಅವರಿಗೆ ಸಾಲಿನಲ್ಲಿ ನಿಲ್ಲಲು ಹಾಸನಾಂಬೆ ದೇವಿಯೇ ಚೈತನ್ಯ ನೀಡಲಿ,” ಎಂದು ಡಿಸಿ ಹಾರೈಸಿದ್ದಾರೆ.
