Trending

ಪ್ರಿಯತಮನಿಗಾಗಿ ಗಂಡನಿಗೆ ಡಿವೋರ್ಸ್ ಈಗ ಗಂಡನೂ ಇಲ್ಲ, ಪ್ರಿಯತಮನೂ ಇಲ್ಲ – ಬೀದಿಗೆ ಬಿದ್ದ ಮಹಿಳೆಯ ಬದುಕು

Spread the love

ಬೀದರ್: ಪ್ರೀತಿಸಿದ ಯುವಕನನ್ನು ಮದುವೆಯಾಗುವ ಉದ್ದೇಶದಿಂದ ಪತಿಗೆ ವಿಚ್ಛೇದನ ನೀಡಿದ್ದ ಮಹಿಳೆಗೆ ಪ್ರಿಯತಮನೇ ಕೈಕೊಟ್ಟಿರುವ ಘಟನೆ ಭಾಲ್ಕಿ ತಾಲೂಕಿನ ನೆಲವಾಡ ಗ್ರಾಮದಲ್ಲಿ ನಡೆದಿದೆ.

ಸಂಗೀತಾ ಎಂಬ ಮಹಿಳೆ ದತ್ತು ಎಂಬ ಯುವಕನೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಯ ಸಂಬಂಧ ಹೊಂದಿದ್ದರು. ಪತಿಗೆ ವಿಚ್ಛೇದನ ನೀಡಿದರೆ ಮದುವೆಯಾಗುವುದಾಗಿ ಯುವಕ ಭರವಸೆ ನೀಡಿದ್ದ ಎನ್ನಲಾಗಿದೆ. ಇದನ್ನು ನಂಬಿದ ಸಂಗೀತಾ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ.

ಆದರೆ ವಿಚ್ಛೇದನದ ಬಳಿಕ ಮದುವೆಯಾಗಲು ದತ್ತು ನಿರಾಕರಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದೀಗ ಯುವಕ ಮನೆಯಿಂದ ನಾಪತ್ತೆಯಾಗಿದ್ದು, ಕಳೆದ 10 ದಿನಗಳಿಂದ ಸಂಗೀತಾ ತನ್ನ ಬ್ಯಾಗ್ ಸಮೇತ ಆತನ ಮನೆಯ ಮುಂದೆ ಕಾಯುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡ ಮಹಿಳೆ

ತನ್ನ ಪರಿಸ್ಥಿತಿಯನ್ನು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸಂಗೀತಾ, ಈ ಹಿಂದೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.

ಆಗ ದತ್ತು ಕುಟುಂಬದವರು ಮದುವೆಗೆ ಒಪ್ಪಿಗೆ ಸೂಚಿಸಿ, ಪತಿಯಿಂದ ವಿಚ್ಛೇದನ ಪಡೆದು ಬರುವಂತೆ ಹೇಳಿದ್ದರು. ಇದೀಗ ವಿಚ್ಛೇದನ ಪಡೆದು ಬಂದ ಬಳಿಕ ದತ್ತುವನ್ನು ಮನೆಯಿಂದ ಕಳುಹಿಸಿ, ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅನ್ಯಾಯ ಮಾಡಿದ್ದಾರೆ ಎಂದು ಕಣ್ಣೀರಿಟ್ಟಿರುವ ಸಂಗೀತಾ, ತನ್ನ ಜೀವಕ್ಕೆ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಪ್ರಿಯತಮನ ಕುಟುಂಬವೇ ಹೊಣೆ ಎಂದು ಆರೋಪಿಸಿದ್ದಾರೆ.

[pj-news-ticker]