Trending

‘2023ರಲ್ಲಿ ಎರಡು ಬಾರಿ ಪ್ರಜ್ವಲ್​​ ಕಾರು ಚಾಲಕನನ್ನು ಡಿಕೆ ಶಿವಕುಮಾರ್​​ ಭೇಟಿಯಾಗಿದ್ದೇಕೆ?’: ಹೆಚ್​​ಡಿಕೆ

Spread the love

ಬೆಂಗಳೂರು : ಪ್ರಜ್ವಲ್ ಪೆನ್‌ಡ್ರೈವ್‌ ಅನ್ನು ನಾನೇ ಹಂಚಿದ್ದು ಅಂತಾ ಆರೋಪಿಸಿದ್ದಾರೆ. ಆದರೆ ಪೆನ್‌ಡ್ರೈವ್ ಹಂಚಿದ್ದು ನಾನಲ್ಲ, ಪ್ರಜ್ವಲ್‌ ಕಾರು ಚಾಲಕ. ಈ ವಿಚಾರದಲ್ಲಿ ಪ್ರಜ್ವಲ್ ಕಾರು ಚಾಲಕನನ್ನು ಮನೆಗೆ ಕರೆಸಿಕೊಂಡು ಡಿಕೆ ಶಿವಕುಮಾರ್​​ ಷಡ್ಯಂತ್ರ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ ಮಾಡಿದ್ದಾರೆ.

ಆ ಕುರಿತ ಕರೆಯ ಮಾಹಿತಿಗಳನ್ನೂ ಅವರು ಬಿಡುಗಡೆ ಮಾಡಿದ್ದಾರೆ. ಆಗಸ್ಟ್ 5,6 2023ರಲ್ಲಿ ಕಾರ್ತಿಕ್ ಡಿಕೆಶಿ ಮನೆಗೆ ಹೋಗಿದ್ದು, ಆ ಕ್ಯಾಸೆಟ್​​ ಆಗಿದ್ದು ನಿಮ್ಮ ಮನೆಯಲ್ಲಾ? ಈ ಬಗ್ಗೆ ತನಿಖೆ ಆಗಿದ್ಯಾ ಎಂದು ಸಿಎಂರನ್ನು ಅವರು ಪ್ರಶ್ನಿಸಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ರಾಹುಲ್ ಪ್ರಧಾನಿ ಆಗುವುದನ್ನು ತಪ್ಪಿಸದರೆಂದು ನನ್ನ ಕುಟುಂಬವನ್ನು ಕಾಂಗ್ರೆಸ್‌ ನಾಯಕರು ನಿರ್ನಾಮ ಮಾಡಲು ಮುಂದಾದರು ಎಂದೂ ಅವರು ದೂರಿದ್ದಾರೆ.

ಸ್ಟಿಂಗ್‌ ಪ್ರಕರಣ ಸಂಬಂಧ ನಿನ್ನೆ ನನ್ನ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್ ಆರೋಪ ಮಾಡಿದ್ದಾರೆ. ಹೀಗಾಗಿ ಈ ವಿಚಾರ ನನಗೆ ತಿರುಗಬಾಣವಾಗುತ್ತೆ ಅಂತಾ ಚರ್ಚೆ ಆಗುತ್ತಿದೆ. ಆದರೆ ದೆಹಲಿಯ ರಿತೇಶ್ ಪಾಂಡೆಯನ್ನು ಅರೆಸ್ಟ್‌ ಮಾಡಿದ್ದು ಎಲ್ಲಿ? ನನ್ನ ನಿವಾಸದಲ್ಲಿ ಆತನನ್ನು ಅರೆಸ್ಟ್ ಮಾಡಿದ್ದಾರಾ? ಎಂದು ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ರಿತೇಶ್ ಪಾಂಡೆ ನನಗೆ ಯಾರು ಅಂತ ಗೊತ್ತಿಲ್ಲ, ಆತನ ಮುಖ ನೋಡಿಲ್ಲ. ನಮ್ಮ ದೆಹಲಿ ಮನೆಗೆ ಸಾಕಷ್ಟು ಜನ ಕೆಲಸ ಹೇಳಿಕೊಂಡು ಬರುತ್ತಾರೆ. ಹೀಗಾಗಿ ಆ ಬಗ್ಗೆ ತನಿಖೆ ಮಾಡಿ. ನಿಮಗೆ ಯಾರೂ ಬೇಡ ಅಂದಿಲ್ಲ. ಆದರೆ ನಿನ್ನೆ ಕಮಿಷನರ್ ಮಾತನಾಡಿರುವುದು ಕಾನೂನು ಬಾಹಿರ.  ನಾನು ಕೋರ್ಟ್​​ಗೆ ಹೋದರೆ ಏನೂ ಆಗುತ್ತದೆ ಎಂದು ಆ ಅಧಿಕಾರಿಗೆ ಗೊತ್ತು. ಆದರೆ ನಾನು ಆ ರೀತಿ ಮಾಡಲ್ಲ. ಯಾಕೆಂದರೆ ಅವರು ಒತ್ತಡಕ್ಕೆ ಮಣಿದು ಹೇಳಿಕೆ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

‘ಈ ಕುಮಾರಸ್ವಾಮಿಯನ್ನು ಟಚ್ ಮಾಡಲು ಆಗಲ್ಲ’

ಈ ಕುಮಾರಸ್ವಾಮಿಯನ್ನು ಟಚ್ ಮಾಡಲು ಆಗಲ್ಲ ಎಂದೂ ಗುಡಿಗಿರುವ ಅವರು, ನಿನ್ನೆ ರಾಜ್ಯೋತ್ಸವ ಆಚರಣೆ ಬಳಿಕ ಎಲ್ಲಿ ಸಭೆ ನಡೆಸಿದ್ದೀರೆಂದು ಗೊತ್ತಿದೆ. ಸ್ಟಿಂಗ್ ಆಪರೇಷನ್ ಕೇಸ್‌ನ್ನು ನನ್ನ ಮನೆಗೂ ಲಿಂಕ್ ಮಾಡಿದ್ದಾರೆ. ತನ್ನ ಮೇಲೆ ಇಡಿ ದಾಳಿಗೆ ಒತ್ತಡ ಅಂತಾ ನನ್ನ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ.

ಆದರೆ ಕೆಪಿಎಸ್‌ಸಿಯ ನಿಮ್ಮ ಕರ್ಮಕಾಂಡಗಳನ್ನು ಮರೆಮಾಚುತ್ತಿರುವುದು ಯಾರು? ನನ್ನ ಸಹೋದರನ ಪುತ್ರನಿಗೆ ಜೀವಾವಧಿ ಶಿಕ್ಷೆ ಕೊಡಿಸಿದ್ದೀರಿ. ಆದರೂ ನಾನು ಯಾರ ಬಳಿಯೂ ಹೋಗಿ ಭಿಕ್ಷೆ ಬೇಡಿಲ್ಲ. ನಾನು ಎಲ್ಲೂ ಪ್ರಕರಣಗಳನ್ನು ಏಕಾಂಗಿಯಾಗಿಯೇ ಎದುರಿಸುತ್ತೇನೆ. ಈ ಬಗ್ಗೆ ಸದನದಲ್ಲೇ ಹೇಳಿದ್ದೇನೆ, ಬೇಕಾದ್ರೆ ದಾಖಲೆ ತೆಗೆದು ನೋಡಿ. ನಿಮ್ಮ ರೀತಿ ನಾನು ರಕ್ಷಣೆ ಪಡೆದುಕೊಂಡಿಲ್ಲ ಎಂದು ಹೆಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ.

[pj-news-ticker]