Trending

ಇಡೀ ದೇಶವೇ ಜಂತರ್ ಮಂತರ್‌ ಆಗಿ ಬದಲಾಗಲಿದೆ : ಮೋದಿ ವಿರುದ್ಧ ದೀಪ್ಕೆ ಗುಡುಗು

Spread the love

ನವದೆಹಲಿ: ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಾಗೂ ಇತರ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇದು ಪ್ರಜಾಪ್ರಭುತ್ವ ಮತ್ತು ಜನರ ಪ್ರತಿಭಟನಾ ಹಕ್ಕಿನ ಮೇಲಿನ ದಾಳಿ ಎಂದೂ ಟೀಕಾಪ್ರಹಾರ ನಡೆಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ದೀಪ್ಕೆ, ‘ಅವರು (ಮೋದಿ) ಜಂತರ್ ಮಂತರ್ ಅನ್ನು ಪ್ರತಿಭಟನಾ ತಾಣದಿಂದ ತೆಗೆದುಹಾಕಿದ್ದಾರೆ. ಹೇಡಿ ಸರ್ವಾಧಿಕಾರಿಯೊಬ್ಬ ಅದನ್ನು ಈಗಾಗಲೇ ಯುದ್ಧ ಭೂಮಿಯನ್ನಾಗಿ ಬದಲಾಯಿಸಿದ್ದ. ಈಗ ಇಡೀ ದೇಶವೇ ಜಂತರ್ ಮಂತರ್ ಆಗಲಿದೆ’ ಎಂದು ಗುಡುಗಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿರುವ ಅವರು, ‘ನಾಳೆ ಅವರು (ಮೋದಿ) ಪ್ರಜಾಪ್ರಭುತ್ವವನ್ನೇ ರದ್ದುಗೊಳಿಸುತ್ತಾರೆ. ಆ ಸರ್ವಾಧಿಕಾರಿಗೆ ಪ್ರತಿಭಟನಾ ಸ್ಥಳ ಸಮಸ್ಯೆಯಾಗಿರಲಿಲ್ಲ, ಬದಲಿಗೆ ಜನರು ಪ್ರತಿಭಟಿಸುವ ಕಲ್ಪನೆಯೇ ಸಮಸ್ಯೆಯಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

[pj-news-ticker]