Trending

ಪತ್ನಿಯನ್ನು ಕೊಂದು ತಲೆ ಕಡಿದು ಫ್ರಿಡ್ಜ್‌ನಲ್ಲಿಟ್ಟಿದ್ದ ಪತಿ ಸಾವು; ಪರಾರಿಯಾಗಲು ಹೋಗಿ ಚಲಿಸುತ್ತಿದ್ದ ಪೊಲೀಸ್‌ ಜೀಪ್‌ನಿಂದ ಬಿದ್ದ ಕಿರಾತಕ

Spread the love

ಗುಹಾವಟಿ: ಕಳೆದ ಒಂದು ವಾರದ ಹಿಂದೆ ಗುಹಾವಟಿಯಲ್ಲಿ ಪತ್ನಿ ರಿಯಾ ತಾಲೂಕ್‌ದಾರ್‌ ಭೀಕರವಾಗಿ ಕೊಲೆ ಮಾಡಿ ಆಕೆಯ ತೆಲೆಯನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಆರೋಪಿ ಪತಿ ರಾಮಾನುಜ್‌ ಗೋಸ್ವಾಮಿ ಪೊಲೀಸ್‌ ವಶದಲ್ಲಿದ್ದಾಗಲೇ ಮೃತಪಟ್ಟಿದ್ದಾನೆ.

ವೈದ್ಯಕೀಯ ತಪಾಸಣೆ ನಂತರ ಪೊಲೀಸ್‌ ಠಾಣೆಗೆ ಕರೆದೊಯ್ಯುವಾಗ ಪೊಲೀಸರ ಮೇಲೆ ದಾಳಿ ಮಾಡಿ, ಪರಾರಿಯಾಗಲು ನೋಡಿದ್ದಾನೆ. ಆ ವೇಳೆ ಚಲಿಸುತ್ತಿದ್ದ ಪೊಲೀಸ್‌ ಜೀಪ್‌ನಿಂದ ಕೆಳಗೆ ರಸ್ತೆಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.

ಪೊಲೀಸ್‌ರ ಮೇಲೆ ದಾಳಿ

ಗುಹಾವಟಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮುಗಿಸಿ ನರಕಾಸುರ್‌ ಪಹಾರ್‌ ಪ್ರದೇಶದ ಬಳಿ ಪೊಲೀಸ್‌ ಠಾಣೆಗೆ ಕರೆದೊಯ್ಯುತ್ತಿದ್ದಾಗ, ಗೋಸ್ವಾಮಿ ಪೊಲೀಸ್‌ ಭದ್ರತಾ ಸಿಬ್ಬಂದಿ ಮೇಲೆ ದಾಳಿ ಮಾಡಿ ಪರಾರಿಯಾಗಲು ಪ್ರಯತ್ನ ಮಾಡಿದ್ದಾನೆ. ಪೊಲೀಸರ ಜೀಪ್‌ ವೇಗದಲ್ಲಿ ಚಲಿಸುತ್ತಿದ್ದ ಕಾರಣ ಈತ ರಸ್ತೆಗೆ ಬಿದ್ದಿದ್ದಾನೆ.

ಈ ವೇಳೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರೊಳಗಾಗಿಯೇ ಆತ ಸಾವನ್ನಪ್ಪಿದ್ದಾನೆ. ಆರೋಪಿಯ ವಿರುದ್ಧ ಹೊಸ ಅಪರಾಧ ಕಾನೂನಾದ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 103(1) (ಕೊಲೆ) ಮತ್ತು ಸೆಕ್ಷನ್ 238 (ಸಾಕ್ಷ್ಯ ನಾಶ) ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯದಿಂದ 7 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು.

[pj-news-ticker]