ಬೆಂಗಳೂರು: ಬಾಬುರಾವ್ ಚಿಂಚನಸೂರ್ ಅವಕಾಶವಾದಿ ರಾಜಕಾರಣಿ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪಿಸಿದರು. ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿ ಪಕ್ಷ ಚಿಂಚನಸೂರ್ ಅವರಿಗೆ ಎಲ್ಲವನ್ನೂ ಕೊಟ್ಟಿತ್ತು. ಅಧಿಕಾರ ಅನುಭವಿಸಿ ಇದೀಗ ಕಾಂಗ್ರೆಸ್‌ಗೆ ಹೋಗುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯರಿಗೆ, ಲೋಕಸಭೆ ಸದಸ್ಯರಿಗೆ ಟಿಕೆಟ್ ಇಲ್ಲ ಎಂಬುದು ಪಕ್ಷದ ನಿಯಮ. ಇವರಿಗಾಗಿ ಅದನ್ನು ಬದಲಾಯಿಸಲಾಗದು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುತ್ತೇನೆಂದು ಬಿಜೆಪಿಗೆ ಬಂದರು. ಇತ್ತೀಚೆಗೆ ಪ್ರಿಯಾಂಕ್ ಖರ್ಗೆ ಸೋಲಿಸುತ್ತೇನೆಂದು ತೊಡೆ ತಟ್ಟಿದರು. ಇದೀಗ ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್‌ಗೆ ಹೋಗುತ್ತಾರೆ ಎಂದು ಪ್ರಶ್ನಿಸಿದರು.