ಶಿವಮೊಗ್ಗ: ಮನೆಯಲ್ಲಿ ಮಲಗಿದ್ದ ವೇಳೆಯೇ ಯುವಕನೋರ್ವನನ್ನು ಕೊಲೆ ಮಾಡಿ ಘಟನೆ ಶಿವಮೊಗ್ಗದ ಸುತ್ತುಕೋಟೆ ಗ್ರಾಮದಲ್ಲಿ ನಡೆದಿದೆ.
ಪ್ರವೀಣ್ (29) ಕೊಲೆಯಾದ ಯುವಕ. ಈತ ಟ್ರಾಕ್ಟರ್ ಬಾಡಿಗೆ ಹಾಗೂ ಇತರ ಕೆಲಸ ಮಾಡಿಕೊಂಡಿದ್ದ.
ಪ್ರವೀಣ್ ಶುಕ್ರವಾರ (ಜೂ.19) ರಾತ್ರಿ ಊಟ ಮಾಡಿ, ಮನೆಯಲ್ಲಿ ಮಲಗಿದ್ದ. ಆದರೆ ಯುವಕರಿಗೆ ಕೆಲಸಕ್ಕೆ ಬರಲು ಹೇಳಿ, ಶನಿವಾರ ಬೆಳಗ್ಗೆ ಪ್ರವೀಣ್ ಕಾಲ್ ಸ್ವೀಕರಿಸದ ಹಿನ್ನಲೆ ಕೆಲಸಕ್ಕೆ ಬಂದ ಯುವಕರು ಪರಿಶೀಲಿಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ.
ವ್ಯವಹಾರಿಕ ವೈಷಮ್ಯದ ಹಿನ್ನೆಲೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರವೀಣ್ ಮೃತದೇಹ ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಗೆ ರವಾನೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
