ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಸಚಿವ ಸಂಪುಟ ವಿಸ್ತರಿಸುವ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ಎಐಎಡಿಎಂಕೆಯ ಬಂಡಾಯ ಶಾಸಕರಿಗೂ ಸಚಿವ ಸ್ಥಾನ ಕೊಡುವ ಸಾಧ್ಯತೆ ಇದೆ ಎಂಬ ಊಹಾಪೋಹ ದಟ್ಟವಾಗಿ ಹರಿದಾಡುತ್ತಿದ್ದು, ಈ ಕುರಿತು ಆಡಳಿತಾರೂಢ ತಮಿಳಗ ವೇಟ್ರಿ ಕಳಗಂ ಸಚಿವ ಅಧವ್ ಅರ್ಜುನ್ ಸ್ಪಷ್ಟನೆ ನೀಡಿದ್ದು, ಟಿವಿಕೆ ನೇತೃತ್ವದ ಮೈತ್ರಿಕೂಟದ ಸರ್ಕಾರ ಒಗ್ಗಟ್ಟಾಗಿದ್ದು, ಸಚಿವ ಸಂಪುಟ ಒಂದು ಕುಟುಂಬದ ರೀತಿ ಕಾರ್ಯನಿರ್ವಹಿಸಬೇಕೆಂಬ ಕನಸು ಸಿಂ ವಿಜಯ್ ಅವರದ್ದಾಗಿದೆ ಎಂದು ತಿಳಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಹಿನ್ನಲೆಯಲ್ಲಿ, ಸಿಪಿಎಂ, ವಿದುತಲೈ ಚಿರುತೈಗಲ್ ಪಕ್ಷಕ್ಕೆ ಟಿವಿಕೆ ಆಹ್ವಾನ ನೀಡಿರುವುದಾಗಿ ಅರ್ಜುನ್ ತಿಳಿಸಿದ್ದಾರೆ.
ಸಿಎಂ ವಿಜಯ್ ಜೋಸೆಫ್ ನೇತೃತ್ವದ ಸರ್ಕಾರ ಒಂದು ವೇಳೆ ಎಐಎಡಿಎಂಕೆ ಬಂಡಾಯ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕೊಟ್ಟರೆ, ಟಿವಿಕೆಗೆ ನೀಡಿರುವ ಬೆಂಬಲ ವಾಪಸ್ ಪಡೆಯುವುದಾಗಿ ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಪಿ.ಷಣ್ಮುಗಂ ಕಠಿನ ಎಚ್ಚರಿಕೆಯ ಸಂದೇಶ ರವಾನಿಸಿದ್ದರು.
ಸಚಿವ ಸಂಪುಟ ವಿಸ್ತರಣೆ, ಮೈತ್ರಿಕೂಟ ಪಕ್ಷಗಳ ಸೇರ್ಪಡೆ ಸಾಧ್ಯತೆ ಹಿನ್ನಲೆಯಲ್ಲಿ ರಾಜ್ಯಪಾಲರಾದ ರಾಜೇಂದ್ರ ವಿಸ್ವನಾಥ ಅರ್ಲೇಕರ್ ಚೆನ್ನೈಗೆ ಆಗಮಿಸಿದ್ದು, ಮಾತುಕತೆ ನಡೆಯುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
