Trending

ಪರಿಸರಕ್ಕೆ ‘ವ್ಯಾಧಿ’ಯಾಗಿರುವ ಪರಿಸರ ಶಿವರಾಂ – ಆರೋಪ

Spread the love

ಭದ್ರಾವತಿ: ಪರಿಸರ ಪ್ರೇಮಿ ಎಂದು ನಂಬಿಸಿ, ಪರಿಸರ ಪ್ರಶಸ್ತಿ ಪಡೆದಿರುವ ಶಿವರಾಮ ಬೇರೆಯವರ ತೋಟದಲ್ಲಿ ಬೆಳೆದು ನಿಂತಿರುವ ಅಡಿಕೆ ಮರ ಹಾಗೂ ಶ್ರೀಗಂಧದ ಮರಗಳನ್ನು ಕಡಿದು ಪರಿಸರ ನಾಶ ಮಾಡಿದ್ದಲ್ಲದೆ ಇಡೀ ಗ್ರಾಮದ ಅಶಾಂತಿಗೆ ಕಾರಣವಾಗಿದ್ದಾರೆ ಎಂದು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಎಸ್. ವಿರೂಪಾಕ್ಷಪ್ಪ ಆರೋಪಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ಹುಣಸೆಕಟ್ಟೆ ಎಚ್. ಕೆ. ಜಂಕ್ಷನ್ ನಲ್ಲಿ ವಾಸವಾಗಿರುವ ಪರಿಸರ ಶಿವರಾಂ ಪತ್ರಕರ್ತನೆಂದು ಹೇಳಿಕೊಂಡು ಅಧಿಕಾರಿಗಳಿಗೆ ಬ್ಲಾಕ್ಮೇಲ್ ಮಾಡುವುದು, ಮೂಖರ್ಜಿ ಬರೆಯುವುದು, ಬೇರೆಯವರ ಹೆಸರಿನಲ್ಲಿ ಸುಳ್ಳು ದೂರು ದಾಖಲಿಸುವುದು, ಪತ್ರಿಕೆಗಳಲ್ಲಿ ತೇಜೋವಧೆ ಮಾಡಿಸುವುದು, ಅಧಿಕಾರಿಗಳಿಗೆ ಹಾಗೂ ಪತ್ರಿಕೆಗಳಿಗೆ ತಪ್ಪು ಮಾಹಿತಿ ಒದಗಿಸಿ ಗೊಂದಲ ಮೂಡಿಸುವುದು ಸೇರಿದಂತೆ ಅನೇಕ ಕಾರಣಗಳಿಗಾಗಿ ಊರಿನ ಅಶಾಂತಿಗೆ ಕಾರಣನಾಗಿದ್ದಾರೆಂದು ವಿರುಪಾಕ್ಷಪ್ಪ ಆರೋಪಿಸಿದರು.

ಹುಣಸೆಕಟ್ಟೆ ಗ್ರಾಮದ ಸರ್ವೆ ನಂಬರ್ 47/2 47/3 ಪೈಕಿ ನನ್ನ ಹೆಸರಿನಲ್ಲಿ 2.28 ಎಕರೆ ಭೂಮಿಯಲ್ಲಿ ಸರ್ಕಾರದ ಕುಡಿಯುವ ನೀರು ಯೋಜನೆಗೆ 3 ಗುಂಟೆ ಜಾಗವನ್ನು ಉಚಿತವಾಗಿ ಬಿಟ್ಟುಕೊಟ್ಟಿರುತ್ತೇನೆ. ಈ ಜಾಗದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಿ ಕಂಬದಾಳ ಹೊಸೂರು, ತಾವರಘಟ್ಟ , ಸಿಂಗನ ಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹತ್ತಾರು ಹಳ್ಳಿಗಳ ಸಾವಿರಾರು ಕುಟುಂಬಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ, ಅಲ್ಲದೆ ಉಳಿದ ನನ್ನ ಜಮೀನಿನಲ್ಲಿ ಅಡಿಕೆ ಹಾಗೂ ಶ್ರೀಗಂಧದ ಮರಗಳನ್ನು ಬೆಳೆಸಲಾಗಿದೆ ಇದಕ್ಕೆ ಪರ್ಯಾಯ ನೀರಿನ ವ್ಯವಸ್ಥೆಯು ಸಹ ಮಾಡಲಾಗಿದೆ ಇದರ ಅರಿವಿದ್ದರೂ ಶಿವರಾಂ ಅದು ಯಾವ ಕಾರಣಕ್ಕಾಗಿ ಅವನ ಮಗ ಮೋಹನನೊಂದಿಗೆ ನಮ್ಮ ತೋಟಕ್ಕೆ ನುಗ್ಗಿ ಬೆಳೆದು ನಿಂತ ಸುಮಾರು 15ಕ್ಕೂ ಹೆಚ್ಚು ಅಡಿಕೆ ಮರ ಶ್ರೀಗಂಧದ ಮರಗಳನ್ನು ಕಡಿದು  ವಿಕೃತಿ ಮೆರೆದಿದ್ದಾರೆ ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರನ್ನು ಸಹ ನೀಡಲಾಗಿದೆ ಎಂದು ಎಸ್ ವಿರೂಪಾಕ್ಷಪ್ಪ ತಿಳಿಸಿದರು.

ಶಿವರಾಂ ತಾನು ವಾಸವಾಗಿರೋ ಜಾಗವೇ ಬಗರ್ ಹುಕುಂ ಆಗಿದ್ದು, ಗ್ರಾಮದ ಬೇರೆ ರೈತರ ಜಮೀನಿನ ವಿರುದ್ಧ ಮೂಕರ್ಜಿ ಬರೆಯುವ ಕೆಲಸ ಮಾಡುತ್ತಿದ್ದಾನೆ ಎಂದು ಆರೋಪಿಸಿರುವ ವಿರುಪಾಕ್ಷಪ್ಪ ಈಗಾಗಲೇ ಶಿವರಾಮ ಸ್ವಾಧೀನದಲ್ಲಿರುವ ನಾಲ್ಕು ಎಕರೆ ಜಾಗವು ಸರ್ಕಾರಿ ಪಡವಾಗಿದ್ದು, ಈ ಜಾಗವನ್ನು ಅಪ್ಪು ಟ್ರಸ್ಟ್ ನವರಿಗೆ ವೃದ್ಧಾಶ್ರಮ, ಅನಾಥಾಶ್ರಮ ನಿರ್ಮಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಿರ್ಮಲ, ಸದಸ್ಯರಾದ ವೀರೇಶ್ ಗೌಳಿ, ವೈದ್ಯರಾದ ಡಾ. ರಾಮಕೃಷ್ಣ, ಡಿಎಸ್ಎಸ್ ಮುಖಂಡರಾದ ಚೌಡಪ್ಪ ಗ್ರಾಮದ ಮುಖಂಡರುಗಳಾದ ಪುಟ್ಟರಾಜುಗೌಡ, ಗಂಗಾಧರ, ಮಂಜುನಾಥ, ರಾಜ ಮುಂತಾದವರು ಉಪಸ್ಥಿತರಿದ್ದರು.

[pj-news-ticker]