ಮೈಸೂರು : ನೈರುತ್ಯ ರೈಲ್ವೆಯು ರೈಲು ಸಂಖ್ಯೆಗಳು 06587- 06588 ಯಶವಂತಪುರ–ತಾಳಗುಪ್ಪ–ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ವಿಶೇಷ ರೈಲನ್ನು ಶಾಶ್ವತ ಸೇವೆಯಾಗಿ ನಿಯಮಿತಗೊಳಿಸಲು ಅನುಮೋದಿಸಿದೆ. ಇದರಂತೆ ಈ ರೈಲುಗಳಿಗೆ ಹೊಸ ಸಂಖ್ಯೆಗಳಾಗಿ ರೈಲು ಸಂಖ್ಯೆಗಳು 16555/16556 ಯಶವಂತಪುರ–ತಾಳಗುಪ್ಪ– ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ಎಂದು ಮರುಸಂಖ್ಯೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ರೈಲು ಸಂಖ್ಯೆ 16555 ಯಶವಂತಪುರ–ತಾಳಗುಪ್ಪ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು 15- 05- 2026 ರಿಂದ ಪ್ರತಿ ಶುಕ್ರವಾರ ಯಶವಂತಪುರದಿಂದ ರಾತ್ರಿ 10:45 ಗಂಟೆಗೆ ಹೊರಡಲಿದ್ದು, ಮುಂದಿನ ದಿನ ಬೆಳಗ್ಗೆ 05:30 ಗಂಟೆಗೆ ತಾಳಗುಪ್ಪ ತಲುಪಲಿದೆ.
ಮಧ್ಯಂತರದಲ್ಲಿ ಈ ರೈಲು ತುಮಕೂರು (23:33/23:35), ತಿಪಟೂರು (00:30/00:32), ಅರಸೀಕೆರೆ ಜಂಕ್ಷನ್ (00:55/00:57), ಬೀರೂರು ಜಂಕ್ಷನ್ (01:33/01:35), ತರೀಕೆರೆ (02:00/02:02), ಭದ್ರಾವತಿ (02:20/02:22), ಶಿವಮೊಗ್ಗ ಟೌನ್ (02:45/02:50), ಆನಂದಪುರಂ (03:50/03:52) ಹಾಗೂ ಸಾಗರ ಜಂಬಗಾರು (04:23/04:25) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ರೈಲು ಸಂಖ್ಯೆ 16556 ತಾಳಗುಪ್ಪ–ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು 16.05.2026 ರಿಂದ ಪ್ರತಿ ಶನಿವಾರ ತಾಳಗುಪ್ಪದಿಂದ ಬೆಳಗ್ಗೆ 10:00 ಗಂಟೆಗೆ ಹೊರಡಲಿದ್ದು, ಸಂಜೆ 05:15 ಗಂಟೆಗೆ ಯಶವಂತಪುರ ತಲುಪಲಿದೆ.
ಮಧ್ಯಂತರದಲ್ಲಿ ಸಾಗರ ಜಂಬಗಾರು (10:16/10:18), ಆನಂದಪುರಂ (10:46/10:48), ಶಿವಮೊಗ್ಗ ಟೌನ್ (12:00/12:05), ಭದ್ರಾವತಿ (12:23/12:25), ತರೀಕೆರೆ (12:45/12:47), ಬೀರೂರು ಜಂಕ್ಷನ್ (13:13/13:15), ಅರಸೀಕೆರೆ ಜಂಕ್ಷನ್ (14:00/14:05), ತಿಪಟೂರು (14:25/14:27) ಹಾಗೂ ತುಮಕೂರು (14:43/14:45) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
