Trending

ಸುಪ್ರೀಂ ಕೋರ್ಟ್ ಮಹತ್ವದ ಆದೇಶ : ಶೃಂಗೇರಿ ಕ್ಷೇತ್ರಕ್ಕೆ ರಾಜೇಗೌಡ ಮತ್ತೆ ಶಾಸಕ

Spread the love

ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಶಾಸಕರಾಗಿ ಟಿ.ಡಿ. ರಾಜೇಗೌಡ ಮುಂದುವರೆಯುವಂತೆ ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ಆದೇಶ ನೀಡಿದೆ.

ಇಂದು ನಡೆದ ವಿಚಾರಣೆಯಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿಗೆ ತಡೆ ಆದೇಶ ನೀಡಿರುವ ಸುಪ್ರೀಂ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ.

ಅಂಚೆ ಮತಗಳ ಮರು ಎಣಿಕೆ ಸಂದರ್ಭದಲ್ಲಿ ಸಿಂಧು ಆಗಿದ್ದ ಮತಗಳು ಅಸಿಂಧು ಆಗಿ “ಪರಿವರ್ತನೆ” ಆಗಿರುವುದು ಬೆಳಕಿಗೆ ಬಂದು ಡಿ .ಎನ್. ಜೀವರಾಜ್ ಗೆ ಹೆಚ್ಚು ಮತಗಳು ಲಭಿಸಿದ್ದ ಪರಿಣಾಮ ಅವರನ್ನು ಶಾಸಕರಾಗಿ ಘೋಷಿಸಲಾಗಿತ್ತು.

ಪ್ರಮಾಣವಚನ ಸ್ವೀಕಾರ ಸಮಾರಂಭ ವಿಳಂಬ ಮಾಡಲಾಗುತ್ತಿದೆ ಎಂದು ರಾಜ್ಯಪಾಲರಲ್ಲಿ ಜೀವರಾಜ್ ದೂರನ್ನು ಸಲ್ಲಿಸಿದ್ದು, ನಂತರ ಪ್ರಮಾಣವಚನ ಕಾರ್ಯಕ್ರಮ ನಡೆಯಿತು.

23ರಲ್ಲಿ ಸಿಂಧು ವಾಗಿದ್ದ ಮತಗಳು ಈಗ ಅಸಿಂಧು ಆಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಮತಗಳನ್ನು ‘ತಿದ್ದಲಾಗಿದೆ’ ಎಂದು ಆರೋಪಿಸಿ ರಾಜೇಗೌಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸದ್ಯಕ್ಕೆ ಅವರೇ ಶಾಸಕರಾಗಿ ಮುಂದುವರೆಯುವಂತೆ ಸೂಚನೆ ನೀಡಿರುವ ಪರಿಣಾಮ ಜೀವರಾಜ್ ‘ಮಾಜಿ’ ಆಗಲಿದ್ದಾರೆ.

ಮತ ಎಣಿಕೆ ಬಳಿಕ ಮತಪತ್ರ ತಿದ್ದಿರುವ ಆರೋಪದ ಹಿನ್ನೆಲೆಯಲ್ಲಿ ಡಿ.ಎನ್.ಜೀವರಾಜ್ ಸೇರಿದಂತೆ ಮೂವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅದಕ್ಕೆ ಹೈಕೋರ್ಟ್ ತಡೆ ನೀಡಿದೆ.

ಈ ಎಲ್ಲಾ ವಿದ್ಯಮಾನಗಳ ಮಧ್ಯೆ ಟಿ.ಡಿ .ರಾಜೇಗೌಡ ಕ್ಷೇತ್ರ ದೇವತೆ ಮುಂದೆ ಆಣೆ ಪ್ರಮಾಣ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಪ್ರಾರ್ಥನೆ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ಇದೇ ತಿಂಗಳ 27ರಂದು ಮತ್ತೆ ನಡೆಯಲಿದೆ. ಅಲ್ಲಿಯವರೆಗಿನ ಬೆಳವಣಿಗೆ ಅತ್ಯಂತ ಕುತೂಹಲ ಮೂಡಿಸಿದೆ.

[pj-news-ticker]