ಮುಂಬೈ: ಬರೊಬ್ಬರಿ ಒಂದು ವರ್ಷ ಏರಿಕೆ ಕಂಡಿದ್ದ ಬೆಳ್ಳಿದರ ಇಂದು ದಿಢೀರ್ ಭಾರಿ ಕುಸಿತಕಂಡಿದ್ದು, ಒಂದು ವರ್ಷದಲ್ಲಿ ಗಳಿಸಿದ್ದ ಲಾಭಾಂಶವನ್ನು ಕಳೆದುಕೊಂಡಿದೆ.
ಹೌದು.. ಬೆಳ್ಳಿಯ ದರವು ತನ್ನ ಗರಿಷ್ಠ ಮಟ್ಟದಿಂದ ಈ ವರೆಗೂ ಬರೊಬ್ಬರಿ 2 ಲಕ್ಷ ರೂಪಾಯಿ ಕುಸಿತ ಕಂಡಿದೆ.
2026ರ ಆರಂಭದಿಂದ ಇದುವರೆಗೆ ಗಳಿಸಿದ ಎಲ್ಲಾ ಲಾಭವನ್ನು ಭಾರತದಲ್ಲಿ ಬೆಳ್ಳಿ ಬೆಲೆ ಕಳೆದುಕೊಂಡಿದೆ.
ಏಪ್ರಿಲ್ 2026ರಲ್ಲಿ ಭಾರತದಲ್ಲಿ ಬೆಳ್ಳಿ ಬೆಲೆಯು ಭಾರೀ ಕುಸಿತ ಕಂಡಿದ್ದು, ವರ್ಷದ ಆರಂಭದಿಂದ ಈವರೆಗೆ ಗಳಿಸಿದ್ದ ಎಲ್ಲಾ ಲಾಭವೂ ಅಳಿಸಿಹೋಗಿದೆ.
ಜನವರಿ ಅಂತ್ಯದಲ್ಲಿ ಪ್ರತಿ ಕೆಜಿಗೆ ಅಂದಾಜು 4.39 ಲಕ್ಷ ರೂ ತಲುಪುವ ಮೂಲಕ ದಾಖಲೆ ನಿರ್ಮಿಸಿದ್ದ ಬೆಳ್ಳಿ ಬೆಲೆ, ಈಗ ಕೆಜಿಗೆ ಬರೊಬ್ಬರಿ 2 ಲಕ್ಷ ರೂ ಗೂ ಅಧಿಕ ಕುಸಿತ ಕಂಡು, ಏಪ್ರಿಲ್ 29, 2026ರ ವೇಳೆಗೆ ಅಂದಾಜು ₹2.38 ಲಕ್ಷದಿಂದ ₹2.40 ಲಕ್ಷ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.
ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳು
2026ರ ಆರಂಭದ ಭರ್ಜರಿ ಏರಿಕೆಯ ನಂತರ ಉಂಟಾದ ಈ ದಿಢೀರ್ ಕುಸಿತಕ್ಕೆ ಜಾಗತಿಕ ಆರ್ಥಿಕ ಮತ್ತು ಭೌಗೋಳಿಕ ಬದಲಾವಣೆಗಳು ಕಾರಣ ಎನ್ನಲಾಗಿದೆ. ಬಲವರ್ಧನೆಗೊಂಡ ಯುಎಸ್ ಡಾಲರ್ ಮತ್ತು ಬಡ್ಡಿದರಗಳೂ ಕೂಡ ಬೆಳ್ಳಿದರ ಕುಸಿತದ ಮೇಲೆ ಗಂಭೀರ ಪರಿಣಾಮ ಬೀರಿದೆ.
ಅಮೆರಿಕದ ಫೆಡರಲ್ ರಿಸರ್ವ್‌ನ ಅಧ್ಯಕ್ಷರಾಗಿ ಕೆವಿನ್ ವಾರ್ಷ್ ಅವರ ನಾಮನಿರ್ದೇಶನವು ಡಾಲರ್ ಮೇಲಿನ ನಂಬಿಕೆಯನ್ನು ಹೆಚ್ಚಿಸಿತು. ಅಂತೆಯೇ ಬಲವಾದ ಡಾಲರ್ ಬೆಳ್ಳಿಯನ್ನು ಇತರ ಕರೆನ್ಸಿಗಳಲ್ಲಿ ಖರೀದಿಸುವವರಿಗೆ ದುಬಾರಿಯಾಗಿಸುತ್ತದೆ.
ಕರ್ನಾಟಕದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ ಇಂತಿದೆ
- ಬೆಂಗಳೂರು : ಪ್ರತಿ ಕೆಜಿಗೆ ₹2,65,000.
- ಮೈಸೂರು : ಪ್ರತಿ ಕೆಜಿಗೆ ₹2,65,000.
- ಹುಬ್ಬಳ್ಳಿ : ಪ್ರತಿ ಕೆಜಿಗೆ ₹2,65,000.
- ಬೆಳಗಾವಿ : ಪ್ರತಿ ಕೆಜಿಗೆ ₹2,65,000.
- ಮಂಗಳೂರು ಮತ್ತು ಉಡುಪಿ: ಪ್ರತಿ ಕೆಜಿಗೆ ₹2,65,000.
