Trending

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಗು.. ಚೈನ್ ಎಳೆದರೂ ನಿಲ್ಲದ ರೈಲು : ಅದ್ಯಾವ ಪುರುಷಾರ್ಥಕ್ಕೆ Emergency ಚೈನ್ ಇಟ್ಟಿದ್ದೀರಾ? ಪ್ರಯಾಣಿಕರ ಆಕ್ರೋಶ

Spread the love

ಕೋಲ್ಕತಾ: ನಿತ್ಯ ಕೋಟ್ಯಂತರ ಮಂದಿ ಪ್ರಯಾಣಿಕರು ಸಂಚರಿಸುವ ಭಾರತೀಯ ರೈಲಿನಲ್ಲಿ ಇಂದು ಮತ್ತೊಂದು ದುರಂತ ಸಂಭವಿಸಿದ್ದು, ರೈಲಿನಿಂದ ಮಗುವೊಂದು ತಾಯಿಕೈಯಿಂದ ಜಾರಿ ಹೊರಗೆ ಬಿದ್ದಿದೆ.

ಹೌದು.. ಪಶ್ಚಿಮ ಬಂಗಾಳದ ಜಲ್ಪೈಗುರಿ-ರಾಮನಗರ ಮಾರ್ಗದಲ್ಲಿ ಈ ದುರಂತ ಸಂಭವಿಸಿದ್ದು, ಮಗು ರೈಲಿನಿಂದ ಕೆಳಗೆ ಬೀಳುತ್ತಲೇ ತಾಯಿ ಆಘಾತಗೊಂಡು ಕಿರುಚಿಕೊಂಡಿದ್ದಾರೆ. ಈ ವೇಳೆ ಸಹ ಪ್ರಯಾಣಿಕರು ರೈಲಿನ ತುರ್ತು ಚೈನ್ ಎಳೆದಿದ್ದಾರೆ. ಆದರೆ ರೈಲು ನಿಂತಿಲ್ಲ, ಬಳಿಕ ಅಲ್ಲಿಯೇ ಇದ್ದ ಇತರೆ ಬೋಗಿಗಳ ಪ್ರಯಾಣಿಕರೂ ಕೂಡ ಚೈನ್ ಎಳೆದಿದ್ದಾರೆ. ಆದರೂ ರೈಲು ನಿಂತಿಲ್ಲ.

ಬೋಗಿಯಲ್ಲಿದ್ದ ಇತರ ಪ್ರಯಾಣಿಕರು ಕೂಡ ಸತತವಾಗಿ ಚೈನ್ ಎಳೆದರೂ ರೈಲು ನಿಲುಗಡೆಯಾಗಲಿಲ್ಲ. ತುರ್ತು ಸಂದರ್ಭದಲ್ಲಿ ರೈಲನ್ನು ನಿಲ್ಲಿಸಲು ಬಳಸುವ ಚೈನ್ ಎಳೆದರೂ ರೈಲು ಸುಮಾರು 10 ರಿಂದ 15 ಕಿಲೋಮೀಟರ್ ವರೆಗೆ ಚಲಿಸುತ್ತಲೇ ಇತ್ತು ಎಂದು ವರದಿಯಾಗಿದೆ.

ಈ ವೇಳೆ ಬೇರೆ ದಾರಿಯಿಲ್ಲದೇ ಸ್ಥಳದಲ್ಲಿದ್ದ ಯುವಕನೊಬ್ಬ ಪೊಲೀಸ್ ಮತ್ತು ಆರ್‌ಪಿಎಫ್ (RPF) ಗೆ ಕರೆ ಮಾಡಿದರೂ ತಕ್ಷಣದ ಸ್ಪಂದನೆ ಸಿಗಲಿಲ್ಲ. ರೈಲ್ವೆ ಅಧಿಕಾರಿಗಳು ಅಥವಾ ಟಿಟಿಇ (TTE) ಕಡೆಯಿಂದಲೂ ಯಾವುದೇ ಸಹಾಯ ಸಿಗಲಿಲ್ಲ. ಹೀಗಾಗಿ ಪ್ರಯಾಣಿಕರ ಸಂಯಮದ ಕಟ್ಟೆ ಹೊಡೆಯಿತು. ರೈಲ್ವೇ ಇಲಾಖೆ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

[pj-news-ticker]