Trending

ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ

Spread the love

ವಿಜಯಪುರ: ವಕ್ಫ್ ಆಸ್ತಿಗಳ ರಾಷ್ಟ್ರೀಕರಣಕ್ಕೆ ಆಗ್ರಹಿಸಿ‌ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೊಂದು ಪಾಕಿಸ್ತಾನ ದೇಶದಲ್ಲಿ ಆಗಲು ಬಿಡಬಾರದು. ಆ ಕಾರಣದಿಂದ ನಾನು ಪಿಎಂಗೆ ಪತ್ರ ಬರೆದಿದ್ದೇನೆ. ಈ ವಕ್ಪ್ ಆಸ್ತಿಯನ್ನು ರಾಷ್ಟ್ರೀಕರಣ ಮಾಡಿ, ರಾಷ್ಟ್ರೀಯ ಸಂಪತ್ತು ಎಂದು ಘೋಷಣೆ ಮಾಡಬೇಕು. ಇಲ್ಲವಾದರೆ ರೈತರು, ಮಠಗಳು, ಮಂದಿಗಳು, ಗ್ರಾಮಗಳು ವಕ್ಪ್ ಎನ್ನಲಾಗುತ್ತಿದೆ ಎಂದರು.

ನೆಹರು -ಗಾಂಧಿ ಮಾಡಿದ ವಕ್ಫ್ ಕರಾಳ ಶಾಸನ, ಪಾಪದ ಕೊಡ ಇಡಿ ಭಾರತವನ್ನೇ ನುಂಗುತ್ತಿದೆ. ಎಲ್ಲ ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣ ಮಾಡಿ ಸಾರ್ವಜನಿಕರಿಗೆ ಹಿಂದುಳಿದ ದಲಿತ ಜನಾಂಗದ ಅಭಿವೃದ್ಧಿಗೆ ಉಪಯೋಗ ಮಾಡಬೇಕು ಎಂದು ವಿಜಯಪುರ ನಗರದಲ್ಲಿ ಶಾಸಕ ಯತ್ನಾಳ ಹೇಳಿದರು.

[pj-news-ticker]