Trending

ಭದ್ರಾವತಿ: ಗ್ಯಾಸ್ ಸಿಲಿಂಡರ್ ಹೆಸರಿನಲ್ಲಿ ವಂಚನೆ : ₹4,500 ಪಡೆದು ಆಟೋದಲ್ಲಿ ಪರಾರಿ

Spread the love

ಭದ್ರಾವತಿ: ನಗರದ ನ್ಯೂ ಟೌನ್ ಪ್ರದೇಶದ ಸಿದ್ದಾರ್ಥ ಅಂದರ ಕೇಂದ್ರಕ್ಕೆ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವ ಘಟನೆ ಏಪ್ರಿಲ್ 22ರಂದು ಬೆಳಕಿಗೆ ಬಂದಿದೆ.

ಯುದ್ಧ ಪರಿಸ್ಥಿತಿಯಿಂದ ಸಿಲಿಂಡರ್ ಕೊರತೆ ಇದೆ ಎಂದು ನಂಬಿಸಿ, ತಾನು ಜಯದೇವ ಗ್ಯಾಸ್ ಏಜೆನ್ಸಿಯ ಮಂಜುನಾಥ್ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಕೇಂದ್ರದಲ್ಲಿ ಮಕ್ಕಳ ಸಂಖ್ಯೆ ಹೆಚ್ಚು ಇರುವುದರಿಂದ ಈಗಲೇ ಸಿಲಿಂಡರ್ ಪಡೆದುಕೊಳ್ಳುವುದು ಉತ್ತಮ ಎಂದು ಹೇಳಿದ್ದಾನೆ. ಇದರಿಂದ ನಂಬಿಕೆಗೊಂಡ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಅವರು ಐದು ಸಿಲಿಂಡರ್‌ಗಳಿಗಾಗಿ ₹4,500 ಹಣವನ್ನು ನೀಡಿದ್ದಾರೆ.

ಹಣ ಪಡೆದ ನಂತರ ಆರೋಪಿತನು ಆಟೋರಿಕ್ಷಾ (KA-14-C-6044)ದಲ್ಲಿ ಪರಾರಿಯಾಗಿದ್ದಾನೆ. ಬಳಿಕ ತಾನು ಮೋಸಹೋಗಿರುವುದನ್ನು ಅರಿತ ಶಿವಬಸಪ್ಪ ಅವರು ನ್ಯೂ ಟೌನ್ ಹಾಗೂ ಪೇಪರ್ ಟೌನ್ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

[pj-news-ticker]