Trending

ಅಮೆರಿಕ – ಇರಾನ್ ಎರಡನೇ ಸುತ್ತಿನ ಮಾತುಕತೆಗೆ ಪಾಕಿಸ್ತಾನದಲ್ಲಿ ಸಿದ್ಧತೆಗಳು ಆರಂಭ

Spread the love

ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆಗೆ ಆತಿಥ್ಯ ವಹಿಸಲು ಪಾಕಿಸ್ತಾನ ಸಿದ್ಧತೆ ನಡೆಸುತ್ತಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಕಳೆದ ವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆ ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯಗೊಂಡಿತ್ತು.

ಉಭಯ ದೇಶಗಳನ್ನು ಮತ್ತೆ ಮಾತುಕತೆಯ ಒ‍ಪ್ಪಿಸಲು ತೀವ್ರ ರಾಜತಾಂತ್ರಿಕ ಚಟುವಟಿಕೆಗಳು ನಡೆದಿವೆ ಎಂದು ಪಾಕಿಸ್ತಾನದ ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ. ಎರಡೂ ರಾಷ್ಟ್ರಗಳು ಎರಡು ವಾರಗಳ ತಾತ್ಕಾಲಿಕ ಕದನ ವಿರಾಮವನ್ನು ಪಾಲಿಸುತ್ತಿರುವುದರಿಂದ, ಪಾಕಿಸ್ತಾನದ ಮಧ್ಯಸ್ಥಿಕೆಯ ಪ್ರಯತ್ನಗಳು ಯಶಸ್ವಿಯಾಗುವ ಮುನ್ಸೂಚನೆ ಸಿಕ್ಕಿದೆ.

ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರದಿಂದ ಮೂರು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದರೆ, ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಟೆಹರಾನ್ ತಲುಪಿದ್ದಾರೆ. ಷರೀಫ್ ಸೌದಿ ಮತ್ತು ಕತಾರ್ ನಾಯಕರೊಂದಿಗೆ ಚರ್ಚಿಸಿ ಗುರುವಾರ ರಾತ್ರಿ ಟರ್ಕಿಗೆ ತೆರಳಿದ್ದಾರೆ. ಇತ್ತ ಫೀಲ್ಡ್ ಮಾರ್ಷಲ್ ಮುನೀರ್ ಅವರು ಇರಾನ್‌ನಲ್ಲಿ 24 ಗಂಟೆಗಳಿಗೂ ಹೆಚ್ಚು ಕಾಲ ತಂಗಿದ್ದು, ಅಲ್ಲಿನ ರಾಜಕೀಯ ಮತ್ತು ಸೇನಾ ನಾಯಕರನ್ನು ಭೇಟಿ ಮಾಡಿದ್ದಾರೆ.

[pj-news-ticker]