Trending

ತಂದೆಯ ಸಾವಿಗೆ ಕೋವಿಡ್ ಲಸಿಕೆ ಕಾರಣ : ಶೇನ್ ವಾರ್ನ್ ಪುತ್ರನ ಗಂಭೀರ ಆರೋಪ

Spread the love

ಸಿಡ್ನಿ: ಕ್ರಿಕೆಟ್ ಜಗತ್ತನ್ನು ಆಘಾತಕ್ಕೀಡುಮಾಡಿದ್ದ ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಮೃತಪಟ್ಟು ನಾಲ್ಕು ವರ್ಷಗಳೇ ಕಳೆದಿದ್ದು, ಇಂದಿಗೂ ಅವರ ಸಾವು ನಿಗೂಢವಾಗಿಯೇ ಇದೆ. ಇದೇ ಸಂರ್ಭದಲ್ಲಿ ಅವರ ಪುತ್ರ ಜಾಕ್ಸನ್ ವಾರ್ನ್ ತಮ್ಮ ತಂದೆಯೇ ಸಾವಿನ ಕುರಿತು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಶೇನ್ ವಾರ್ನ್ ಅವರ ಹಠಾತ್ ನಿಧನದ ನಾಲ್ಕು ವರ್ಷಗಳ ನಂತರ, ಅವರ ಮಗ ಜಾಕ್ಸನ್ ಆಸ್ಟ್ರೇಲಿಯಾದ ಸ್ಪಿನ್ ದಂತಕಥೆಯ ಸಾವು ಬಹುಶಃ ಬಲವಂತದ ಕೋವಿಡ್ ಲಸಿಕೆಗಳಿಂದಾಗಿರಬಹುದು ಎಂದು ಹೇಳಿದ್ದಾರೆ.

‘2 ವರ್ಲ್ಡ್ಸ್ ಕೊಲೈಡ್ ಪಾಡ್‌ಕ್ಯಾಸ್ಟ್’ ನಲ್ಲಿ ಮಾತನಾಡಿದ ಜಾಕ್ಸನ್, ‘ನಮ್ಮ ತಂದೆ ಕೆಲ ಆರೋಗ್ಯ ಸಮಸ್ಯೆಗಳಿದಿದ್ದು ನಿಜ. ಆದರೆ ಅವರ ಸಾವಿನಲ್ಲಿ COVID ಲಸಿಕೆ ಕಾರಣವಿತ್ತು ಎಂದು ನಾನು ಖಂಡಿತವಾಗಿಯೂ ಭಾವಿಸುತ್ತೇನೆ. ಅದು ಇನ್ನು ಮುಂದೆ ವಿವಾದಾತ್ಮಕವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ.

ವಾರ್ನ್ ಸಾವಿನ ಸುದ್ದಿಯನ್ನು ಸ್ವೀಕರಿಸಿದ ನಂತರ ‘ಅಪ್ಪ ತೀರಿಹೋದ ಸುದ್ದಿ ಕೇಳಿ ಫೋನ್ ಕೆಳಗಿಟ್ಟ ಕೂಡಲೇ, ನನ್ನ ಮೊದಲ ಆಲೋಚನೆ ಸರ್ಕಾರವನ್ನು ದೂಷಿಸುವುದಾಗಿತ್ತು. ನಾನು ತಕ್ಷಣವೇ ಕೋವಿಡ್ ಮತ್ತು ಲಸಿಕೆಯನ್ನು ದೂಷಿಸಿದ್ದೆ.

ತಂದೆಯವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡದಂತೆ ತಮ್ಮನ್ನು ತಾವು ತಡೆದುಕೊಂಡಿದ್ದ ಕುರಿತು ಮಾತನಾಡಿದ ಜಾಕ್ಸನ್ ವಾರ್ನ್, ‘ಅಂದು ಹಾಗೆ ಮಾಡದಿರುವುದು ಒಳ್ಳೆಯದಾಯಿತು, ಒಂದು ವೇಳೆ ಮಾತನಾಡಿದ್ದರೆ ಇಂದು ನಾನು ಬೇರೆಯೇ ಪರಿಸ್ಥಿತಿಯಲ್ಲಿರುತ್ತಿದ್ದೆ. ಆದರೆ, ನನ್ನ ಮನಸ್ಸಿನ ಭಾವನೆ ಮಾತ್ರ ಅದೇ ಆಗಿತ್ತು’ ಎಂದು ಹೇಳಿದ್ದಾರೆ.

‘ಈ ಹಿಂದೆಯೂ ಅನೇಕರು ಹೃದಯಾಘಾತದಿಂದ ಸಾಯುತ್ತಿದ್ದರು. ಆದರೆ, ಅಪ್ಪ ಚೆನ್ನಾಗಿದ್ದರು. ಅವರು ಮೂರು ಅಥವಾ ನಾಲ್ಕನೇ ಡೋಸ್ ಕೋವಿಡ್‌ ಲಸಿಕೆ ಪಡೆದಿದ್ದರು. ಅವರಿಗೆ ಲಸಿಕೆ ಪಡೆಯುವುದು ಇಷ್ಟವಿರಲಿಲ್ಲ, ಆದರೆ, ಕೆಲಸದ ಕಾರಣಕ್ಕಾಗಿ ಎಲ್ಲರಂತೆ ಅವರು ಕೂಡ ಒತ್ತಾಯಪೂರ್ವಕವಾಗಿ ಲಸಿಕೆ ಪಡೆದಿದ್ದರು’ ಎಂದು ಜಾಕ್ಸನ್ ಹೇಳಿದ್ದಾರೆ.

[pj-news-ticker]